ಪುತ್ತೂರಿನ ವಿವಿಧೆಡೆ ಜನರೇಟರ್ ಬ್ಯಾಟರಿ ಕಳವು ಪ್ರಕರಣ ➤ ಆರೋಪಿ ಬಂಧನ

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 11. ಇಲ್ಲಿನ ನಗರ ಠಾಣಾ ವ್ಯಾಪ್ತಿಯ ದರ್ಬೆಯ ಹಿತ ಆಸ್ಪತ್ರೆ‌ ಹಾಗೂ ಪುತ್ತೂರು ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ಶ್ರೀ ಸಾಯಿ ಲಾಡ್ಜ್ ಇಲ್ಲಿನ ಜನರೇಟರ್ ಬ್ಯಾಟರಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಬಂಧಿಸುವಲ್ಲಿ ಪುತ್ತೂರು ನಗರ ಠಾಣಾ ಪಿ.ಎಸ್.ಐ ನೇತೃತ್ವದ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿಯನ್ನು ಕೇರಳ ರಾಜ್ಯದ ಕೊಲ್ಲಂ ಜಿಲ್ಲೆಯ ಇಟ್ಟಿ ಪನ್ನಿಕರ್ ಬಿನ್ ಮ್ಯಾಥ್ಯು ಪನ್ನಿಕರ್ ಎಂದು ಗುರುತಿಸಲಾಗಿದೆ. ಬಂಧಿತನನ್ನು ಕಳವುಗೈದ ಬ್ಯಾಟರಿ ಸಹಿತ ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪತ್ತೆ ಕಾರ್ಯಾಚರಣೆಯಲ್ಲಿ ಪುತ್ತೂರು ಪೊಲೀಸ್ ಉಪಾಧೀಕ್ಷಕರ ನಿರ್ದೇಶನದಂತೆ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕ ಸುನೀಲ್ ಕುಮಾರ್ ಮಾರ್ಗದರ್ಶನದಲ್ಲಿ ಪಿ.ಎಸ್.ಐ. ರಾಜೇಶ್ ಕೆ.ವಿ.‌ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎಚ್.ಸಿ. ಸ್ಕರಿಯಾ, ಜಗದೀಶ್, ಸುಬ್ರಮಣ್ಯ, ಪಿ.ಸಿ. ಕಿರಣ್ ಕುಮಾರ್ ಭಾಗವಹಿಸಿರುತ್ತಾರೆ.

Also Read  ಕಾಸರಗೋಡು: ಕೊಲೆ ಪ್ರಕರಣ ➤ ಅರೋಪಿಗೆ 5 ವರ್ಷ ಜೈಲು ಶಿಕ್ಷೆ

error: Content is protected !!
Scroll to Top