ಕಡಬ: ಅಕ್ರಮ ಗೋಸಾಗಾಟ, ಕಸಾಯಿಖಾನೆ ತಡೆಗೆ ಆಗ್ರಹಿಸಿ ವಿಹಿಂಪ ಮನವಿ

(ನ್ಯೂಸ್ ಕಡಬ) newskadaba.com ಕಡಬ, ಜು. 11. ಕಡಬ ಠಾಣಾ ವ್ಯಾಪ್ತಿಯಲ್ಲಿ ಗೋಸಾಗಾಟ ಮತ್ತು ಕಸಾಯಿಖಾನೆಗಳು ತಲೆ ಎತ್ತುತ್ತಿದ್ದು, ಇದನ್ನು ಶೀಘ್ರವೇ ಪತ್ತೆ ಹಚ್ಚಿ ತಡೆಯಬೇಕೆಂದು ಆಗ್ರಹಿಸಿ ಕಡಬ ಪ್ರಖಂಡ ವಿ.ಹಿಂ.ಪ. ಭಜರಂಗದಳ ವತಿಯಿಂದ ಕಡಬ ಎಸ್.ಐ ಅವರಿಗೆ ಮನವಿ ಸಲ್ಲಿಸಲಾಯಿತು.

‘ಮುಸ್ಲಿಮರ ಹಬ್ಬದ ಸಂದರ್ಭದಲ್ಲಿ ಅಲ್ಲಲ್ಲಿ ಗೋಸಾಗಾಟ ಮತ್ತು ಕಸಾಯಿಖಾನೆಗಳು ನಡೆಯುತ್ತದೆ. ಇದನ್ನು ತಡೆದು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು’ ಅವರು ಮನವಿಯಲ್ಲಿ ಆಗ್ರಹಿಸಿದ್ದಾರೆ. ಈ ಸಂದರ್ಭದಲ್ಲಿ ವಿ.ಹಿಂ.ಪ ಕಡಬ ಪ್ರಖಂಡ ಅಧ್ಯಕ್ಷ ರಾಧಕೃಷ್ಣ ಕೋಲ್ಪೆ, ಉಪಾಧ್ಯಕ್ಷ ಸುರೇಶ್, ಎನ್. ಕೋಟೆಗುಡ್ಡೆ, ಕಾರ್ಯದರ್ಶಿ ಪ್ರಮೋದ್ ರೈ ನಂದುಗುರಿ, ಬಜರಂಗದಳದಳ ಸಹ ಸಂಯೋಜಕ ಯತೀಶ್ ಹೊಸಮನೆ, ಸಾಮಾಜಿಕ ಕಾರ್ಯಕರ್ತ ಪ್ರಸಾದ್ ನೆಟ್ಟಣ, ಮರ್ದಾಳ ಬಜರಂಗದಳದ ಪ್ರಮುಖ್ ವಿನಯ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Also Read  ಸುಬ್ರಹ್ಮಣ್ಯ: ಎರಡನೇ ದಿನವು ಮುಂದುವರಿದ ಅಂಗಡಿ ತೆರವು ಕಾರ್ಯಾಚರಣೆ

error: Content is protected !!
Scroll to Top