ಉಳ್ಳಾಲ: ಪತಿ ಮನೆಯಲ್ಲಿ ಕಿರುಕುಳ- ಪತ್ನಿ ನಿಗೂಢ ಸಾವು ➤ ಕೊಲೆ ಶಂಕೆ..!!

(ನ್ಯೂಸ್ ಕಡಬ) newskadaba.com ಉಳ್ಳಾಲ, ಜು.11. ಗೃಹಿಣಿಯೋರ್ವಳು ಗಂಡನ ಮನೆಯಲ್ಲಿ ನಿಗೂಢವಾಗಿ ಮೃತಪಟ್ಟ ಘಟನೆ ಉಳ್ಳಾಲದ ಮುಕ್ಕಚ್ಚೇರಿ ಎಂಬಲ್ಲಿ ಭಾನುವಾರದಂದು ಸಂಜೆ ನಡೆದಿದೆ.

ಮೃತ ಮಹಿಳೆಯನ್ನು ಜಂಶೀರ (25) ಎಂದು ಗುರುತಿಸಲಾಗಿದೆ. ಮಿಲ್ಲತ್ ನಗರ ನಿವಾಸಿಯಾದ ಜಂಶೀರಾಳನ್ನು ಎರಡು ವರ್ಷಗಳ ಹಿಂದೆ ಮುಕ್ಕಚ್ಚೇರಿ ನಿವಾಸಿ ಇರ್ಫಾನ್ ಜೊತೆ ವಿವಾಹ ಮಾಡಿಕೊಡಲಾಗಿದ್ದು, ದಂಪತಿಗೆ 8 ತಿಂಗಳ ಗಂಡು ಮಗುವಿದೆ. ವಿವಾಹವಾದದ ಆರಂಭದಲ್ಲೇ ದಂಪತಿ ನಡುವೆ ಕುಟುಂಬ ಕಲಹ ನಡೆಯಿತ್ತಿದ್ದು, ಹಿರಿಯರು ಸೇರಿ ಮಾತುಕತೆ ನಡೆಸಿ ದಂಪತಿಗಳ ಕಲಹವನ್ನು ಇತ್ಯರ್ಥಗೊಳಿಸುತ್ತಿದ್ದರು ಎಂದೆನ್ನಲಾಗಿದೆ. ಈ ಕುರಿತು ಜಂಶೀರಾ ಸಹೋದರಿಗೆ ಆಕೆಯ ಗಂಡನ ಮನೆಯವರು ಫೋನ್ ಮಾಡಿ, ಜಂಶೀರಾ ನೇಣು ಬಿಗಿದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದು ಆಕೆ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಆದರೆ ಮಗಳ ನಿಗೂಢ ಸಾವಿನ ಬಗ್ಗೆ ಜಂಶೀರಾ ಪೋಷಕರು ಸಂಶಯ ವ್ಯಕ್ತಪಡಿಸಿದ್ದು, ಜಂಶೀರಾಳ ಮೃತದೇಹವನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇರಿಸಲಾಗಿದೆ. ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕವೇ ಸಾವಿನ ನಿಗೂಢತೆ ಬೆಳಕಿಗೆ ಬರುವ ಸಾಧ್ಯತೆಯಿದೆ. ಇತ್ತ ಜಂಶೀರಾಳ ಪತಿ ಇರ್ಫಾನ್ ನನ್ನು ವಶಕ್ಕೆ ಪಡೆದಿರುವ ಉಳ್ಳಾಲ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

Also Read  ಹೊಸಮಠ: ಅಕ್ರಮ ಮರಳು ದಂಧೆ ➤ ವಾಹನ ಸಹಿತ ಇಬ್ಬರು ವಶಕ್ಕೆ

error: Content is protected !!
Scroll to Top