ಕಿರು ಸೇತುವೆಯಿಂದ ಕೆಳಕ್ಕೆ ಬಿದ್ದ ಕಾರು ನೀರಿನಲ್ಲಿ ಪತ್ತೆ ➤ ಮೂವರು ನೀರುಪಾಲಾಗಿರುವ ಶಂಕೆ

(ನ್ಯೂಸ್ ಕಡಬ) newskadaba.com ಕಡಬ, ಜು.10. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಉಕ್ಕಿ ಹರಿಯುತ್ತಿರುವ ಹೊಳೆಗೆ ಬಿದ್ದ ಘಟನೆ ಶನಿವಾರ ತಡರಾತ್ರಿ ಕಾಣಿಯೂರು ಸಮೀಪದ ಬೈತಡ್ಕ ಎಂಬಲ್ಲಿ ನಡೆದಿದ್ದು ಇದೀಗ ಕಾರಿನಲ್ಲಿದ್ದವರ ಗುರುತು ಪತ್ತೆಯಾಗಿದೆ.

ಪುತ್ತೂರಿನಿಂದ ಕಾಣಿಯೂರು ಕಡೆಗೆ ತೆರಳುತ್ತಿದ್ದ ಮಾರುತಿ 800 ಕಾರು ತಡರಾತ್ರಿ ವೇಳೆಗೆ ಬೈತಡ್ಕ ಗೌರಿಹೊಳೆಗೆ ಬಿದ್ದಿದ್ದು, ಈ ದೃಶ್ಯವು ಬೈತಡ್ಕ ಜುಮಾ ಮಸೀದಿಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಪ್ರಾಥಮಿಕ ಮಾಹಿತಿಯಂತೆ ಕಾರು ಗುತ್ತಿಗಾರು ಮೂಲದವರದ್ದಾಗಿದ್ದು, ಕಾರಿನಲ್ಲಿ ಒಟ್ಟು ಮೂವರು ಇದ್ದರೆನ್ನಲಾಗಿದೆ. ಮೂವರು ನೀರುಪಾಲಾಗಿರುವ ಶಂಕೆ ವ್ಯಕ್ತವಾಗಿದ್ದು, ಬೆಳ್ಳಾರೆ ಠಾಣಾ ಉಪ ನಿರೀಕ್ಷಕ ರುಕ್ಮ ನಾಯ್ಕ್ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ಆರಂಭಗೊಂಡಿದೆ. ಕಾರು ನೀರಿನ ಅಡಿಭಾಗದಲ್ಲಿ ಗೋಚರಿಸಿದ್ದು, ಕಾರನ್ನು ಮೇಲಕ್ಕೆತ್ತುವ ಕೆಲಸ ಆಗಬೇಕಿದೆ. ಸ್ಪಷ್ಟ ಮಾಹಿತಿ ಕಾರನ್ನು ಮೇಲಕ್ಕೆತ್ತಿದ ಬಳಿಕ ತಿಳಿದು ಬರಬೇಕಿದೆ.

Also Read  ಎಲ್ ಪಿಜಿ ಬಳಕೆದಾರರಿಗೆ ಬಿಗ್ ಶಾಕ್ ➤ ಇಂದಿನಿಂದ ರೂ. 103.50ಕ್ಕೆ ಏರಿಕೆಯಾದ ವಾಣಿಜ್ಯ ಸಿಲಿಂಡರ್..!

 

error: Content is protected !!
Scroll to Top