ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆ ➤ ಸೈಂಟ್ ಆನ್ಸ್ ಶಾಲೆಯ ಪ್ರಣಮ್ ಸಂಕಡ್ಕ ತೃತೀಯ

(ನ್ಯೂಸ್ ಕಡಬ) newskadaba.com ಕಡಬ, ಜು. 08. ವಿಜಯ ಕರ್ನಾಟಕ ಕನ್ನಡ ದಿನಪತ್ರಿಕೆ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಸ್ತುತಪಡಿಸಿದ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯ ಶಾಲಾ ವಿದ್ಯಾರ್ಥಿಗಳಿಗೆ ನಡೆಸಿದ ಜಿಲ್ಲಾಮಟ್ಟದ ಚಿತ್ರಕಲಾ ಸ್ಪರ್ಧೆಯಲ್ಲಿ ಕಡಬದ ಸೈಂಟ್ ಆನ್ಸ್ ಶಾಲೆಯ 6ನೇ ತರಗತಿಯ ವಿದ್ಯಾರ್ಥಿ ಪ್ರಣಮ್ ಸಂಕಡ್ಕ ತೃತೀಯ ಸ್ಥಾನವನ್ನು ಗಳಿಸಿರುತ್ತಾನೆ. ಇವನು ಶ್ರೀಚಿನ್ನಪ್ಪ ಸಂಕಡ್ಕ ಮತ್ತು ಶ್ರೀಮತಿ ಭಾರತಿ ದಂಪತಿಗಳ ಪುತ್ರ. ಇವನಿಗೆ ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ಇವರು ಚಿತ್ರಕಲಾ ತರಬೇತಿಯನ್ನು ನೀಡಿರುತ್ತಾರೆ.

Also Read  ಕಡಬ: ಇಲಿಜ್ವರಕ್ಕೆ ಯುವಕ ಬಲಿ

error: Content is protected !!
Scroll to Top