ಓಮ್ನಿ ಮೇಲೆ ಪಲ್ಟಿಯಾದ ಸರಕು ಸಾಗಾಟದ ಲಾರಿ..! ➤ ಚಾಲಕ ಗಂಭೀರ

(ನ್ಯೂಸ್ ಕಡಬ) newskadaba.com ಸುರತ್ಕಲ್, ಜು. 08. ಸರಕು ಸಾಗಾಟದ ಲಾರಿಯೊಂದು ಓಮ್ನಿ ಕಾರಿನ ಮೇಲೆ ಪಲ್ಟಿಯಾದ ಪರಿಣಾಮ ಓಮ್ನಿ ಚಾಲಕ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ಹೊನ್ನಕಟ್ಟೆ ಜಂಕ್ಷನ್ ನಲ್ಲಿ ಶುಕ್ರವಾರ ಮಧ್ಯಾಹ್ನ ನಡೆದಿದೆ.

ಘಟನೆಯಲ್ಲಿ ಓಮ್ನಿ ಸಂಪೂರ್ಣ ಅಪ್ಪಚ್ಚಿಯಾಗಿದ್ದು, ಸುರತ್ಕಲ್ ಉತ್ತರ ಟ್ರಾಫಿಕ್ ಪೊಲೀಸರು ಸ್ಥಳಕ್ಕಾಗಮಿಸಿ ಕ್ರೇನ್ ಸಹಾಯದಿಂದ ಲಾರಿಯನ್ನು ಎತ್ತಿ ಓಮ್ನಿ ಚಾಲಕನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

error: Content is protected !!
Scroll to Top