ಟ್ಯಾಂಕರ್ ನಿಂದ ಲಿಕ್ವಿಡ್ ಸೋರಿಕೆ ➤ ಸಾರ್ವಜನಿಕರಲ್ಲಿ ಆತಂಕ

(ನ್ಯೂಸ್ ಕಡಬ) newskadaba.com ಕಾಪು‌, ಜು. 08. ಟ್ಯಾಂಕರ್ ವೊಂದರಿಂದ ರಾಷ್ಟ್ರೀಯ ಹೆದ್ದಾರಿ 66 ರ ಉಳಿಯಾರಗೋಳಿ ಬಿಕ್ಕೋ ಎಂಬಲ್ಲಿ ಲಿಕ್ವಿಡ್ ಸೋರಿಕೆಯಾಗುತ್ತಿದ್ದು ಸಾರ್ವಜನಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.


ಮಂಗಳೂರು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ನ ಹೊರ ಭಾಗದಲ್ಲಿ ಲಿಕ್ವಿಡ್ ಸೋರಿಕೆಯಾಗಿದ್ದು, ಸ್ಥಳೀಯರು ಭಯಭೀತಗೊಂಡಿದ್ದು, ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ‌ ದೌಡಾಯಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಘಟನಾ ಸ್ಥಳಕ್ಕೆ ಕಾಪು‌ ಪೊಲೀಸರು ಸ್ಥಳಕ್ಕೆ‌ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Also Read  ಕಡಬ: ಕಡವೆಗೆ ಢಿಕ್ಕಿ ಹೊಡೆದ ಅಪರಿಚಿತ ವಾಹನ ➤ ಗಾಯಗೊಂಡ ಕಡವೆ ಪಿಲಿಕುಳಕ್ಕೆ ವರ್ಗಾವಣೆ

error: Content is protected !!
Scroll to Top