ಮಾಣಿ: ತೂಫಾನ್ ಹಾಗೂ ಟ್ಯಾಂಕರ್ ನಡುವೆ ಢಿಕ್ಕಿ ➤ ತೂಫಾನ್ ಚಾಲಕ ಗಂಭೀರ

(ನ್ಯೂಸ್ ಕಡಬ) newskadaba.com ವಿಟ್ಲ, ಜು.07. ತೂಫಾನ್ ಹಾಗೂ ಟ್ಯಾಂಕರ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿದ ಪರಿಣಾಮ ತೂಫಾನ್ ಚಾಲಕ ಗಂಭೀರ ಗಾಯಗೊಂಡ ಘಟನೆ ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಮಾಣಿ ಎಂಬಲ್ಲಿ ಗುರುವಾರ ರಾತ್ರಿ ಸಂಭವಿಸಿದೆ.

ಬುಡೋಳಿ ಸಮೀಪದ ಐಡಿಯಲ್ ಕ್ಯಾಶ್ಯೂ ಸಂಸ್ಥೆಗೆ ಸೇರಿದ ತೂಫನಾ ಕಾರ್ಮಿಕರನ್ನು ಬಿಟ್ಟು ಹಿಂತಿರುಗುತ್ತಿದ್ದ ವೇಳೆ ಮಾಣಿ ದಾರುಲ್ ಇರ್ಶಾದ್ ಮಸೀದಿಯ ಬಳಿ ಟ್ಯಾಂಕರ್ ನಡುವೆ ಢಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ತೂಫಾನ್ ಚಾಲಕ ಸುರೇಂದ್ರ ಗಂಭೀರ ಗಾಯಗೊಂಡಿದ್ದು, ಮಾಣಿಯ ಇಖ್ವಾ ಆಂಬ್ಯುಲೆನ್ಸ್ ಮೂಲಕ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

Also Read  ಮಂಗಳಾದೇವಿ ದೇವಸ್ಥಾನ ನವರಾತ್ರಿ ಉತ್ಸವ - 11 ಸ್ಟಾಲ್ ಗಳ ಹರಾಜು

 

 

error: Content is protected !!
Scroll to Top