ಬೆಳ್ತಂಗಡಿ: ಅಕ್ರಮ ಮರ ಸಾಗಾಟ ➤ ಲಾರಿ‌ ಚಾಲಕ ಅರೆಸ್ಟ್

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು. 07. ಅಕ್ರಮವಾಗಿ ಮರ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಅಟೋ ಚಾಲಕರು ತಡೆಹಿಡಿದು ಪೊಲೀಸರಿಗೊಪ್ಪಿಸಿದ ಘಟನೆ ತಾಲೂಕಿನ ಉಪ್ಪಿನಂಗಡಿ ಕಣಿಯೂರು ಎಂಬಲ್ಲಿ ನಡೆದಿದೆ.

 

ಬೆಳಾಲು ಕಡೆಯಿಂದ ಉಪ್ಪಿನಂಗಡಿ ಮಾರ್ಗವಾಗಿ ಚಲಿಸುತ್ತಿದ್ದ ಲಾರಿ ಚಾಲಕ ಕಣಿಯೂರು ಎಂಬಲ್ಲಿ ರಿಕ್ಷಾ ಚಾಲಕರಿಗೆ ಸೈಡ್ ಬಿಡದೆ ರಿಕ್ಷಾ ಚಾಲಕರೊಂದಿಗೆ ವಾಗ್ವಾದಕ್ಕಿಳಿದಿದ್ದು, ಈ ವೇಳೆ ಅನುಮಾನಗೊಂಡ ಚಾಲಕರು ಲಾರಿಯನ್ನು ತಡೆ ಹಿಡಿದು, ಬಳಿಕ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ಕುರಿತು ವಿಚಾರಣೆ ನಡೆಸಿದಾಗ ಚಾಲಕ ತನ್ನಲ್ಲಿ ಯಾವುದೇ ಪರವಾನಿಗೆ ಇಲ್ಲ ಎಂದು ಹೇಳಿದ್ದಾನೆ. ಬಂಧಿತ ಆರೋಪಿಯಿಂದ ಸರಿಸುಮಾರು ಏಳು ಲಕ್ಷ ಮೌಲ್ಯದ ಮರ ವಶಪಡಿಸಿಕೊಳ್ಳಲಾಗಿದೆ.

Also Read  ಕಲ್ಲುಗುಡ್ಡೆ: ಬಿರುವೆರ್ ಕುಡ್ಲ ಪುತ್ತೂರು ಘಟಕದ ಸದಸ್ಯತ್ವ ಅಭಿಯಾನ

error: Content is protected !!
Scroll to Top