(ನ್ಯೂಸ್ ಕಡಬ) newskadaba.com ಕಡಬ, ಜು. 07. ಸರಕಾರದ ಮಾರ್ಗಸೂಚಿಯಂತೆ ದೇಶದಾದ್ಯಂತ ನಿಷೇಧಿಸಲಾಗಿರುವ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳ ಉತ್ಪಾದನೆ, ಸಂಗ್ರಹ, ಬಳಕೆ ಹಾಗೂ ಮಾರಾಟಗಳನ್ನು ಕಡಬ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಿಷೇಧಿಸಲಾಗಿದೆ.
ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಜುಲೈ 01ರಿಂದ ಜಾರಿಗೆ ಬರುವಂತೆ ಏಕ ಬಳಕೆಯ ಪ್ಲಾಸ್ಟಿಕ್ (ಎಸ್.ಯು.ಪಿ) ವಸ್ತುಗಳ ಪ್ಲಾಸ್ಟಿಕ್ ಉತ್ಪನ್ನಗಳಾದ ಪ್ಲಾಸ್ಟಿಕ್ ಪ್ಲೇಟ್‌ಗಳು, ಪ್ಲಾಸ್ಟಿಕ್ ಕಪ್‌ಗಳು, ಪ್ಲಾಸ್ಟಿಕ್ ಧ್ವಜಗಳು ಪ್ಲಾಸ್ಟಿಕ್ ಸ್ಪೂನ್‌ಗಳು, ಅಂಟಿಕೊಳ್ಳುವ ಪಿಲ್ಮ್‌ಗಳು, ಎಲ್ಲ ದಪ್ಪದ ಡೈನಿಂಗ್ ಟೇಬಲ್‌ಗೆ ಹರಡಲು ಬಳಸುವ ಪ್ಲಾಸ್ಟಿಕ್ ಹಾಳೆಗಳು, ಸ್ಪ್ರಾಗಳು, ಥರ್ಮಾ ಕೋಲ್ ಮತ್ತು ಪ್ಲಾಸ್ಟಿಕ್ ಮೈಕ್ರೋ ಮಣಿಗಳಿಂದ ಮಾಡಿದ ವಸ್ತುಗಳು, ಪ್ಲಾಸ್ಟಿಕ್ ಸ್ಟಿಕ್‌ಗಳೊಂದಿಗೆ ಇಯರ್ ಬಡ್‌ಗಳು, ಬಲೂನ್‌ಗಳಿಗೆ ಬಳಸುವ ಪ್ಲಾಸ್ಟಿಕ್ ಪಾಲಿ ಸ್ಪೆರೀಸ್ (ಥರ್ಮಾಕೋಲ್), ಪ್ಲಾಸ್ಟಿಕ್ ಪೋರ್ಕ್‌ಗಳು, ಪ್ಲಾಸ್ಟಿಕ್ ಚಾಕು, ಪ್ಲಾಸ್ಟಿಕ್ ಟ್ರೇಗಳಂತಹ ಕಟ್ಲರಿಗಳು, ಸ್ವೀಟ್ ಬಾಕ್ಸಾ ಸುತ್ತಲೂ ಸುತ್ತುವ ಪ್ಯಾಕಿಂಗ್ ಫಿಲ್ಮ್‌ಗಳು, ಪ್ಲಾಸ್ಟಿಕ್ ಆಮಂತ್ರಣ ಪತ್ರಗಳು ಮತ್ತು ಪ್ಲಾಸ್ಟಿಕ್ ಸಿಗರೇಟ್ ಪ್ಯಾಕೇಟ್‌ಗಳು, 100ಮೈಕ್ರಾನಿಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಸ್ಟಿಕ್ಕರ್ ಗಳು ಹಾಗೂ ಇನ್ನಿತರ ಏಕ ಬಳಕೆಯ ಪ್ಲಾಸ್ಟಿಕ್ ಉತ್ಪನ್ನಗಳನ್ನು ಸರಕಾರದ ಮಾರ್ಗಸೂಚಿಯಂತೆ ದೇಶಾದ್ಯಂತ ನಿಷೇಧಿಸಲಾಗಿದೆ. ಎಲ್ಲಾ ಸಾರ್ವಜನಿಕರು, ಗ್ರಾಹಕರು, ವ್ಯಾಪಾರಸ್ಥರು ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಉತ್ಪಾದನೆ, ಸಂಗ್ರಹಣೆ, ವಿತರಣೆ, ಮಾರಾಟ ಮತ್ತು ಬಳಕೆ ಮಾಡಬಾರದೆಂದು ತಿಳಿಸಲಾಗಿದೆ. ಅಧಿಕಾರಿಗಳು ಪರಿಶೀಲನೆಗೆ ಬಂದಾಗ ಮೇಲೆ ತಿಳಿಸಿದ ಸಾಮಾಗ್ರಿಗಳು ಕಂಡು ಬಂದಲ್ಲಿ ಅವುಗಳನ್ನು ಮುಟ್ಟು ಗೋಲು ಹಾಕಿ ದಂಡ ವಿಧಿಸಲಾಗುವುದು ಎಲ್ಲರೂ ಸಹಕರಿಸುವಂತೆ ಕಡಬ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪಕೀರ ಮೂಲ್ಯ ಅವರು ತಿಳಿಸಿದ್ದಾರೆ.