ಎಸ್ಸೆಸ್ಸೆಲ್ಸಿ, ಪಿಯುಸಿ, ಡಿಗ್ರಿ ನಂತರ ಮುಂದೇನು ಎಂಬ ಯೋಚನೆಯೇ..? ➤ ಕಡಬದಲ್ಲಿನ ‘ಕರ್ನಾಟಕ ಸ್ಟೂಡೆಂಟ್ಸ್ ವೆಲ್ಫೇರ್ ಸೊಸೈಟಿ’ಯಲ್ಲಿದೆ ಹಲವು ಮಾಹಿತಿ

(ನ್ಯೂಸ್ ಕಡಬ) newskadaba.com ಕಡಬ, ಜು. 06. ಕಳೆದ ಕೆಲವು ವರ್ಷಗಳಿಂದ ಕಡಬದ ಶಿವಗಣೇಶ್ ಕಾಂಪ್ಲೆಕ್ಸ್ ನಲ್ಲಿ ಕಾರ್ಯಾಚರಿಸುತ್ತಿರುವ ಕರ್ನಾಟಕ ಸ್ಟೂಡೆಂಟ್ಸ್ ವೆಲ್ಫೇರ್ ಸೊಸೈಟಿಯು ಹಲವಾರು ವಿದ್ಯಾರ್ಥಿಗಳಿಗೆ ತಮ್ಮ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟಂತೆ ಉತ್ತಮ ಕೋರ್ಸ್ ಗಳ ಬಗ್ಗೆ, ವಿದ್ಯಾರ್ಥಿ ವೇತನ, ಸರಕಾರಿ ಸೌಲಭ್ಯ ಹಾಗೂ ಬೇಡಿಕೆಯುಳ್ಳ ಉದ್ಯೋಗ ಮಾಹಿತಿ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.

ಅಲ್ಲದೇ ಈ ಸಂಸ್ಥೆಯ ಮಾಹಿತಿ ಹಾಗೂ ಮಾರ್ಗದರ್ಶನದಿಂದ ಇಂದು ಅನೇಕ ವಿದ್ಯಾರ್ಥಿಗಳು ಬೇಡಿಕೆಯುಳ್ಳ ಕೋರ್ಸ್ ಗಳನ್ನು ಹಾಗೂ ಉದ್ಯೋಗಾವಕಾಶವನ್ನು ಪಡೆದು ದೇಶ ವಿದೇಶಗಳಲ್ಲಿ ತಮ್ಮ ಜೀವನದ ಯಶಸ್ಸನ್ನು ಕಂಡಿದ್ದಾರೆ. ವಿದ್ಯಾರ್ಥಿಗಳಿಗೆ ಬರುವ ರಾಜ್ಯ ಹಾಗೂ ಕೇಂದ್ರ ಸರಕಾರದ ವಿದ್ಯಾರ್ಥಿ ವೇತನದ ಬಗ್ಗೆ, ಹಾಸ್ಟೆಲ್ ಸೌಲಭ್ಯ ಹಾಗೂ ವಿವಿಧ ಸರಕಾರಿ ಸೌಲಭ್ಯಗಳ ಬಗ್ಗೆ KSWS ಸಂಸ್ಥೆಯಿಂದ ಪಡೆದುಕೊಳ್ಳಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಾದ NEET, CET ಹಾಗೂ KEA ಇನ್ನಿತರ ಪರೀಕ್ಷೆಗಳ ನೋಂದಾವಣಿಯ ಮಾಹಿತಿ ಹಾಗೂ ಮಾರ್ಗದರ್ಶನವನ್ನು ಪಡೆದುಕೊಳ್ಳಬಹುದಾಗಿದ್ದು, ತೀರಾ ಬಡ ವಿದ್ಯಾರ್ಥಿಗಳಿಗೆ ಹಾಗೂ ಶೇಕಡಾ 60ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದಂತಹ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ವಿನಾಯಿತಿ ದೊರೆಯಲಿದೆ. ಹೆಚ್ಚಿನ ಮಾಹಿತಿಗಾಗಿ +91 9945085102, +91 8277040402, +91 9108511907 ಸಂಖ್ಯೆಯನ್ನು ಅಥವಾ ಸಂಸ್ಥೆಯ ವೆಬ್‌ಸೈಟ್‌ http://www.kswsonline.com, kswskarnataka@gmail.com ನ್ನು ಸಂಪರ್ಕಿಸುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Also Read  ಗ್ರಾಮೀಣ ಜನತೆಗೆ ಸಿಹಿಸುದ್ದಿ; ಇನ್ಮುಂದೆ ಜನನ-ಮರಣ ಪ್ರಮಾಣ ಪತ್ರ ಗ್ರಾಮ ಪಂಚಾಯತ್ ಗಳಲ್ಲೇ ಲಭ್ಯ

error: Content is protected !!
Scroll to Top