ಅರಂತೋಡು SKSBV ವತಿಯಿಂದ ಅನ್ನುಜೂಂ ಬಕ್ರೀದ್ ಹಬ್ಬದ ವಿಶೇಷಾಂಕ ಬಿಡುಗಡೆ

(ನ್ಯೂಸ್ ಕಡಬ) newskadaba.com ಅರಂತೋಡು, ಜು. 06. ಸಮಸ್ತ ಕೇರಳ ಸುನ್ನಿ ಬಾಲ ವೇದಿ ನುಸ್ರತುಲ್ ಇಸ್ಲಾಂ ಮದರಸ ಅರಂತೋಡು ಇದರ ವತಿಯಿಂದ ನುಸ್ರತುಲ್ ಇಸ್ಲಾಂ ಮದರಸ ಅಧ್ಯಾಪಕ ಸ-ಅದ್ ಫೈಝಿ ಸಂಪಾದಕತ್ವದ ಅನ್ನುಜೂಂ ಬಕ್ರೀದ್ ಹಬ್ಬದ ವಿಶೇಷಾಂಕವನ್ನು ಅರಂತೋಡು ತೆಕ್ಕಿಲ್ ಪ್ರತಿಷ್ಠಾನ ಸ್ಥಾಪಕಾಧ್ಯಕ್ಷರಾದ ಟಿ.ಎಮ್.ಶಹೀದ್ ತೆಕ್ಕಿಲ್ ಬಿಡುಗಡೆಗೊಳಿಸಿದರು.

ಅರಂತೋಡು ಜುಮ್ಮಾ ಮಸೀದಿ ಖತೀಬರಾದ ಬಹು ಅಲ್ ಹಾಜ್ ಇಸ್ಹಾಖ್ ಬಾಖವಿ ದುವಾ ನೆರವೇರಿಸಿದರು. ಜಮಾಅತ್ ಅಧ್ಯಕ್ಷರಾದ ಅಶ್ರಫ್ ಗುಂಡಿ ಅಧ್ಯಕ್ಷತೆಯನ್ನು ವಹಿಸಿದ್ದರು. ಸದರ್ ಸಹದ್ ಫೈಝಿ ಸ್ವಾಗತಿಸಿ ವಿಶೇಷಾಂಕದ ಉದ್ದೇಶವನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ಸಹಾಯಕ ಅಧ್ಯಾಪಕ ಹಾಜಿ ಸಾಜಿದ್ ಅಝ್ಜಹರಿ, ಜಮಾಅತ್ ಕಾರ್ಯದರ್ಶಿ ಕೆ.ಎಮ್.ಮೂಸಾನ್, ದ್ಸಿಕ್ರ್ ಸ್ವಲಾತ್ ಸಮಿತಿ ಉಪಾಧ್ಯಕ್ಷ ಕೆ.ಎಮ್ ಅಬೂಬಕ್ಕರ್ ಪಾರೆಕ್ಕಲ್, ಮದರಸ ಮ್ಯಾನೇಜ್‌ಮೆಂಟ್ ಸಂಚಾಲಕ ಅಮೀರ್ ಕುಕ್ಕುಂಬಳ, ಅನ್ವಾರುಲ್ ಹುದಾ ಯಂಗ್ ಮೆನ್ಸ್ ಎಸೋಸಿಯೇಶನ್ ನಿರ್ದೇಶಕರಾದ ಎ.ಹನೀಫ್, ಮುಝಮ್ಮಿಲ್, ಸಮದ್ ಕೊಡೆಂಕೇರಿ, ಮುಜೀಬ್, ಹಾಜಿ ಅಝರುದ್ದೀನ್, ಮಾಜಿ ಅಧ್ಯಕ್ಷ ಅಬ್ದುಲ್ ಖಾದರ್ ಪಟೇಲ್, ಕೆ.ಎಮ್.ಉಸ್ಮಾನ್, ಎಸ್ ಕೆ ಎಸ್ ಎಸ್ ಎಫ್ ಅರಂತೋಡು ಶಾಖೆ ಅಧ್ಯಕ್ಷ ಅಶೀಕ್ ಕುಕ್ಕುಂಬಳ, ಅಬ್ದುಲ್ಲಾ ಗುಂಡಿ, ಸಿದ್ದೀಕ್ ಎ, ಹಮೀದ್.ಎ, ಸುನ್ನೀ ಬಾಲ ವೇದಿಕೆ ಅಧ್ಯಕ್ಷ ಅಝರುದ್ದೀನ್ ಕಾರ್ಯದರ್ಶಿ ಅನ್ಸಾಫ್, ಕೊಶಾಧಿಕಾರಿ ಮುಝಮ್ಮಿಲ್, ಅಕ್ಮಲ್ ಮೊದಲಾದವರು ಉಪಸ್ಥಿತರಿದ್ದರು.

Also Read  ಹವಾಮಾನ ವೈಪರೀತ್ಯದಿಂದ ರಾಜ್ಯಕ್ಕೆ ವೈರಾಣು ಜ್ವರದ ಭೀತಿ

error: Content is protected !!
Scroll to Top