ಒಂಟಿ ಮಹಿಳೆಯರ ಕುತ್ತಿಗೆಯಿಂದ ಚಿನ್ನಾಭರಣ ದೋಚುವ ತಂಡ ► ಮೂವರು ಆರೋಪಿಗಳು ಮಂಗಳೂರು ಪೊಲೀಸರ ಬಲೆಗೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.12. ನಗರದಲ್ಲಿ ಒಂದೆರಡು ವರ್ಷಗಳಿಂದ ಜನರಹಿತ ಪ್ರದೇಶಗಳಲ್ಲಿ ನಡೆದುಕೊಂಡು ಹೋಗುವ ಒಂಟಿ ಮಹಿಳೆಯರ ಸರಗಳ್ಳತನ ಮಾಡುತ್ತಿದ್ದ ಮೂವರು ಯುವಕರನ್ನು ಬಂಧಿಸುವಲ್ಲಿ ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹದ ದಳದ ಪೊಲೀಸ್ ತಂಡ ಯಶಸ್ವಿಯಾಗಿದೆ.

ಬಂಧಿತ ಆರೋಪಿಗಳನ್ನು ಆಕಾಶಭವನ ನಿವಾಸಿ ಅಲ್ವಿನ್, ಅಶೋಕ ನಗರ ನಿವಾಸಿ ಮನೀಷ್, ದೇರಳಕಟ್ಟೆ ನಿವಾಸಿ ಅಶ್ವಿನ್ ಎಂದು ಗುರುತಿಸಲಾಗಿದೆ. ಇವರು ಜನ/ವಸತಿ ರಹಿತ ಪ್ರದೇಶಗಳಲ್ಲಿ ನಡೆದುಕೊಂಡು ಹೋಗುವ ಒಂಟಿ ಮಹಿಳೆಯರನ್ನು ಕೇಂದ್ರವಾಗಿರಿಸಿಕೊಂಡು, ಮೋಟಾರ್‌ ಸೈಕಲ್‌ಗಳಲ್ಲಿ ದಾರಿ ಕೇಳುವ ನೆಪದಲ್ಲಿ ಅವರ ಬಳಿ ಹೋಗಿ ಅವರ ಕುತ್ತಿಗೆಯಲ್ಲಿರುವ ಚಿನ್ನದ ಕರಿಮಣಿ ಸರಗಳನ್ನು ಕಸಿದುಕೊಂಡು ಬೈಕ್‌‌ಗಳಲ್ಲಿ ಪರಾರಿಯಾಗುತ್ತಿದ್ದರೆನ್ನಲಾಗಿದ್ದು, ಇವರ ತಂಡ ದೇರಳಕಟ್ಟೆಯಲ್ಲಿದೆ ಎನ್ನುವ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ದಳ ಮತ್ತು ಮಂಗಳೂರು ದಕ್ಷಿಣ ಉಪ ವಿಭಾಗದ ಸಹಾಯಕ ಪೊಲೀಸ್ ಆಯುಕ್ತರ ತಂಡವು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದೆ.

Also Read  ಮಂಗಳೂರು: ಪಬ್ ಜಿ ವಿಚಾರದಲ್ಲಿ ಆಕಿಫ್ ಕೊಲೆ ಹಿನ್ನೆಲೆ ➤ ಆರೋಪಿ ದೀಪಕ್ ತಂದೆಯ ಬಂಧನ

ಆರೋಪಿಗಳಿಂದ ಚಿನ್ನದ ಕರಿಮಣಿ ಸರ ಮತ್ತು ಚಿನ್ನದ ಸರಗಳು, ಮೋಟಾರ್ ಸೈಕಲ್‌, ಸ್ಕೂಟರ್‌, ಮೊಬೈಲ್‌ ಪೋನ್‌ ಇತ್ಯಾದಿ ಸುಮಾರು 4,57,150 ರೂಪಾಯಿ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

error: Content is protected !!
Scroll to Top