ಕೊಕ್ಕಡ: ಅನ್ಯಕೋಮಿನ ಅಪ್ರಾಪ್ತ ಜೋಡಿ ಪತ್ತೆ

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜು. 05. ಧರ್ಮಸ್ಥಳದಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ನಲ್ಲಿ ಅನ್ಯಕೋಮಿನ ಅಪ್ರಾಪ್ತ ಜೋಡಿಯನ್ನು ತಡೆದ ಹಿಂದೂ ಸಂಘಟನಾ ಕಾರ್ಯಕರ್ತರು ಧರ್ಮಸ್ಥಳ ಪೊಲೀಸರಿಗೊಪ್ಪಿಸಿದ ಘಟನೆ ಕೊಕ್ಕಡದಲ್ಲಿ ಸೋಮವಾರದಂದು ರಾತ್ರಿ ನಡೆದಿದೆ.

 

ಬೆಂಗಳೂರು ಜಿಲ್ಲೆಯ ದೇವನಹಳ್ಳಿಯ ವ್ಯಾಪ್ತಿಯ ಒಂದೇ ಕಾಲೇಜಿನ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಬ್ಬರು (ಹಿಂದೂ ಬಾಲಕಿ ಮತ್ತು ಮುಸ್ಲಿಂ ಬಾಲಕ) ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಬಂದು ರಾತ್ರಿ ವಾಪಾಸ್ ಬಸ್ ನಲ್ಲಿ ಹೋಗುತ್ತಿದ್ದ ವೇಳೆ ಮಾಹಿತಿ ತಿಳಿದ ಹಿಂದೂ ಸಂಘಟನಾ ಕಾರ್ಯಕರ್ತರು ಧರ್ಮಸ್ಥಳ ಪೊಲೀಸರಿಗೆ ನೀಡಿದ್ದರು. ಅದರಂತೆಯೇ ಧರ್ಮಸ್ಥಳ ಪೊಲೀಸೆರು ಬೆಂಗಳೂರು ದೇವನಹಳ್ಳಿ ಠಾಣೆಗೆ ಮಾಹಿತಿ ನೀಡಿದ್ದಾರೆ.

Also Read  ಮೂರು ಅಂಗಡಿಗಳಿಂದ ಕಳ್ಳತನ - ದೃಶ್ಯ ಸಿಸಿಟಿವಿಯಲ್ಲಿ ಸೆರೆ

error: Content is protected !!
Scroll to Top