ಸುಳ್ಯ: ನಿರಂತರವಾಗಿ ನಡೆಯುತ್ತಿರುವ ಭೂಕಂಪನ- ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಎಸ್ಡಿಪಿಐ ವತಿಯಿಂದ ತಹಶೀಲ್ದಾರರಿಗೆ ಮನವಿ ➤ ತುರ್ತು ಸೇವೆಗೆ ಎಸ್ಡಿಪಿಐ ರೆಸ್ಕ್ಯೂ ತಂಡ ಸಹಕಾರ

(ನ್ಯೂಸ್ ಕಡಬ) newskadaba.com ಸುಳ್ಯ, ಜು. 05. ತಾಲೂಕಿನ ಸಂಪಾಜೆ, ಗೂನಡ್ಕ, ಚೆಂಬು ಸೇರಿದಂತೆ ಹಲವೆಡೆ ಕಳೆದೊಂದು ವಾರದಲ್ಲಿ 6 ಕ್ಕೂ ಹೆಚ್ಚು ಬಾರಿ ಭೂಕಂಪನ ಉಂಟಾದ ವಿಚಾರವಾಗಿ ಎಸ್ಡಿಪಿಐ ಸುಳ್ಯ ನಿಯೋಗ ತಹಶೀಲ್ದಾರರನ್ನು ಭೇಟಿಯಾಗಿ ಈ ಕೆಳಗಿನ ಅಗತ್ಯ ಕ್ರಮಗಳ ಬಗ್ಗೆ ಚರ್ಚಿಸಲಾಯಿತು. ತಾಲ್ಲೂಕಿನ ಹಲವು ಭಾಗಗಳಲ್ಲಿ ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುವ ಜನರಿದ್ದು, ಅವರನ್ನು ಮುಂಜಾಗ್ರತಾ ಕ್ರಮವಾಗಿ ಬೇರೆ ಪ್ರದೇಶಕ್ಕೆ ಸ್ಥಳಾಂತರ ಮಾಡಿ ಬದಲಿ ವ್ಯವಸ್ಥೆಯನ್ನು ಕಲ್ಪಿಸಬೇಕಾಗಿದೆ. ಸುಳ್ಯದಲ್ಲಿ ವಿಪತ್ತು ನಿರ್ವಹಣಾ ತಂಡ (NDRF) ವನ್ನು ಸಿದ್ಧತೆಗೊಳಿಸಿಡಬೇಕು ಹಾಗೂ ಹಲವಾರು ಸಂಘ ಸಂಸ್ಥೆಗಳನ್ನು ಸಂಪರ್ಕಿಸಿ ರಕ್ಷಣಾ ತರಬೇತಿಯನ್ನು ನೀಡಬೇಕು. ಮುಂಜಾಗ್ರತಾ ಕ್ರಮವಾಗಿ ಬೇಕಾಗಿರುವ ಎಲ್ಲಾ ಪೂರ್ವ ತಯಾರಿಯನ್ನು ಜಿಲ್ಲಾಡಳಿತ, ತಾಲೂಕು ಆಡಳಿತ ನಡೆಸಬೇಕು ಹಾಗೂ ಜಿಲ್ಲಾಧಿಕಾರಿಗಳು ಸ್ಥಳವನ್ನು ಪರಿಶೀಲಿಸಿ ಅಗತ್ಯ ಮುಂಜಾಗ್ರತಾ ಕ್ರಮ ಜರುಗಿಸಬೇಕೆಂದು ಎಸ್‌ಡಿಪಿಐ ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಮನವಿಯಲ್ಲಿ ಆಗ್ರಹಿಸಿತು. ಹಾಗೆಯೇ ಜಿಲ್ಲೆಯಾದ್ಯಂತ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಸುಳ್ಯ ತಾಲೂಕಿನಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ್ದಲ್ಲಿ ಸಾರ್ವಜನಿಕರ ಸೇವೆಗೆ SDPI ಪಕ್ಷದ ವತಿಯಿಂದ ತುರ್ತು ಕಾರ್ಯಾಚರಣೆಗೆ ತಂಡವನ್ನು ರಚಿಸಲಾಗಿದೆ. ಆದುದರಿಂದ ಸಾರ್ವಜನಿಕರು ಮತ್ತು ಯಾವುದೇ ಇಲಾಖೆಗಳು ನಮ್ಮನ್ನು ಸಂಪರ್ಕಿಸಬಹುದು ಎಂಬ ಮಾಹಿತಿಯನ್ನೂ ತಹಶೀಲ್ದಾರರಿಗೆ ನೀಡಲಾಯಿತು.

Also Read  ಮನೆ ಮುಂದೆ ನಿಲ್ಲಿಸಿದ್ದ ರಿಕ್ಷಾಗೆ ಬೆಂಕಿ ಹಚ್ಚಿದ ಕಿಡಿಗೇಡಿ   ➤ ಆರೋಪಿಯ ಬಂಧನಕ್ಕೆ ಬಲೆ ಬೀಸಿದ ಪೊಲೀಸರು

ಈ ಸಂದರ್ಭದಲ್ಲಿ SDPI ಸುಳ್ಯ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಇಕ್ಬಾಲ್ ಬೆಳ್ಳಾರೆ, ಉಪಾಧ್ಯಕ್ಷರಾದ ಬಾಬು ಎನ್ ಸವಣೂರು, ಕಾರ್ಯದರ್ಶಿ ರಫೀಕ್ ಎಂ.ಎ, ಸದಸ್ಯರಾದ ಅಬ್ದುಲ್ ಕಲಾಂ ಸುಳ್ಯ, ಸುಳ್ಯ ಬ್ಲಾಕ್ ಸಮಿತಿ ಅಧ್ಯಕ್ಷ ಆಬಿದ್ ಪೈಚಾರ್, ಸುಳ್ಯ ನಗರ ಸಮಿತಿ ಅಧ್ಯಕ್ಷ ಮೀರಝ್ ಸುಳ್ಯ, ಬೆಳ್ಳಾರೆ ಬ್ಲಾಕ್ ಸಮಿತಿ ಅಧ್ಯಕ್ಷ ಹಮೀದ್ ಮರಕ್ಕಡ, ಸುಳ್ಯ ಬ್ಲಾಕ್ ಕಾರ್ಯದರ್ಶಿ ಮುನೀರ್ ಶೈನ್ ಉಪಸ್ಥಿತರಿದ್ದರು.

Also Read  ದ.ಕ ಜಿಲ್ಲೆಯಲ್ಲಿ ಹೊಸ ಮುಖಗಳಿಗೆ ಟಿಕೆಟ್ ➤ ಹಿರಿಯರಿಗೆ ಖಡಕ್ ಸಂದೇಶ ರವಾನಿಸಿದ ಹೈಕಮಾಂಡ್ !

error: Content is protected !!
Scroll to Top