ಗೂನಡ್ಕ: ಪ್ರಾಕೃತಿಕ ವಿಕೋಪದ ಹಿನ್ನೆಲೆ ➤ ಜನರಿಗೆ ಸ್ಪಂದಿಸುವ ನಿಟ್ಟಿನಲ್ಲಿ ನುರಿತ ಕಾರ್ಮಿಕರನ್ನೊಳಗೊಂಡ ಕಾಂಗ್ರೆಸ್ ಕಾರ್ಯಕರ್ತರಿಂದ ತುರ್ತು ಸಭೆ

(ನ್ಯೂಸ್ ಕಡಬ) newskadaba.com ಗೂನಡ್ಕ, ಜು. 04. ಭೂಕಂಪನ ಹಾಗೂ ಭಾರೀ ಮಳೆಯ ಹಿನ್ನೆಲೆ ಗೂನಡ್ಕ ಭಾಗದ ಜನರಿಗೆ ಸಮಸ್ಯೆಯಾದಲ್ಲಿ ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪಂದಿಸುವ ಸಲುವಾಗಿ ಸಂಪಾಜೆಯ ದರ್ಖಾಸ್ತು ವಾರ್ಡ್ ನ ಗ್ರಾಮ ಪಂಚಾಯತ್ ಸದಸ್ಯರಾದ ಶೌವಾದ್ ಗೂನಡ್ಕರವರ ನೇತೃತ್ವದಲ್ಲಿ ನುರಿತ ಕಾರ್ಮಿಕರನ್ನೊಳಗೊಂಡ ಕಾರ್ಯಕರ್ತರ ತುರ್ತು ಸಭೆಯು ಗೂನಡ್ಕದ ಅವರ ಕಚೇರಿಯಲ್ಲಿ ಜರುಗಿತು.

ಸಭೆಯಲ್ಲಿ ಪ್ರಮುಖರಾದ ಜಿ.ಜಿ.ನವೀನ್ ಕುಮಾರ್, ರವಿಚಂದ್ರ ಮುನ್ನ, ಸಫ್ವಾನ್ ಪೆಲ್ತಡ್ಕ, ಪ್ರವೀಣ್ ಕುಮಾರ್, ಸಲೀಂ, ಹೇಮನಾಥ್, ಶಿಹಾಬುದ್ದೀನ್, ಜಯಚಂದ್ರ, ಅವಿನಾಶ್, ಹರ್ಷಿತ್ ಮುನ್ನ, ವಾಹಿದ್ ದರ್ಖಾಸ್ ಮೊದಲಾದವರು ಉಪಸ್ಥಿತರಿದ್ದರು.

Also Read  ಕುಂದಾಪುರ: ವ್ಯಕ್ತಿಯೋರ್ವನ ಬರ್ಬರ ಹತ್ಯೆ

error: Content is protected !!
Scroll to Top