ಮಾಣಿ: ಮುಂದುವರಿದ ಸರಣಿ ಕಳ್ಳತನ ➤ ವರ್ತಕರ ಆಕ್ರೋಶ

(ನ್ಯೂಸ್ ಕಡಬ) newskadaba.com ಮಾಣಿ, ಜು. 04. ಇಲ್ಲಿನ ಪೇಟೆಯ ತರಕಾರಿ ಅಂಗಡಿ ಹಾಗೂ ಬೇಕರಿ ಅಂಗಡಿಗಳಿಗೆ ಶನಿವಾರದಂದು ರಾತ್ರಿ ನುಗ್ಗಿದ ಕಳ್ಳರು ಚಿಲ್ಲರೆ ಹಣವನ್ನು ಕದ್ದೊಯ್ದಿದ್ದು, ಮರುದಿನ ಮತ್ತೆ ರಾತ್ರಿ ಮಾಣಿ ಪೆಟ್ರೋಲ್ ಬಂಕ್ ಹತ್ತಿರ ಇರುವ ಟಯರ್ ಅಂಗಡಿ ಹಾಗೂ ಹಳೀರದಲ್ಲಿರುವ ಮತ್ತೊಂದು ಟಯರ್ ಅಂಗಡಿಗೆ ನುಗ್ಗಿ ಟೈರುಗಳನ್ನು ಕದ್ದುಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ.

ಈ ಕುರಿತು ಆಕ್ರೋಶಗೊಂಡ ವರ್ತಕರು, ರಾತ್ರಿ ವೇಳೆ ಅಂಗಡಿಗೆ ಬೀಗ ಹಾಕಿ ಮನೆಗೆ ಹೋಗಿ ನೆಮ್ಮದಿಯಿಂದ ಮಲಗುವಂತಿಲ್ಲ, ಪ್ರಕರಣ ದಾಖಲಿಸಿದರೂ ಏನೂ ಪ್ರಯೋಜನವಿಲ್ಲ ಎಂದು ಸಿಟ್ಟಿಗೆದ್ದಿದ್ದಾರೆ.

Also Read  ಡಿವೈಎಫ್‌ಐ ಕಾರ್ಯಕರ್ತನ ಕೊಲೆ ಖಂಡಿಸಿ ಪ್ರತಿಭಟನೆ

error: Content is protected !!
Scroll to Top