(ನ್ಯೂಸ್ ಕಡಬ) newskadaba.com ಮಂಗಳೂರು, ಜು. 04. ನವಮಂಗಳೂರು ಬಂದರಿಗೆ ಭಾರೀ ಗಾತ್ರದ ಸರಕು ಸಾಗಾಟದ ಹಡಗು ಆಗಮಿಸಿದ್ದು ಇದನ್ನು ನೀರು ಹಾಯಿಸುವ ಮೂಲಕ ಸ್ವಾಗತಿಸಲಾಯಿತು.
‘ಎಂ.ಎಸ್.ಸಿ ಎರ್ಮಿನಿಯಾ’ ಹೆಸರಿನ ಹಡಗು ಇದಾಗಿದ್ದು, ಕೊಲಂಬಿಯಾದಿಂದ 1265 ಆಮದು ಸರಕು ಪೆಟ್ಟಿಗೆಗಳನ್ನು ಹೊತ್ತು ಮಂಗಳೂರು ಬಂದರಿಗೆ ರವಿವಾರದಂದು ತಲುಪಿದೆ. ಈ ಹಡಗಿನಿಂದ ಸರಕನ್ನು ಇಳಿಸುವ ಕಾರ್ಯಕ್ಕೆ ನವ ಮಂಗಳೂರು ಬಂದರು ಪ್ರಾಧಿಕಾರದ ಅಧ್ಯಕ್ಷ ಡಾ.ವೆಂಕಟರಮಣ ಅಕ್ಕರಾಜು ಚಾಲನೆ ನೀಡಿದರು. ಬಂದರಿನ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಗೂ ಜೆಎಸ್‌ಡಬ್ಲ್ಯು ಅಧಿಕಾರಿಗಳು ಉಪಸ್ಥಿತರಿದ್ದರು. ಈ ಹಡಗು 276.5 ಮೀ.ಉದ್ದ ಹಾಗೂ 32.2 ಮೀ. ಅಗಲದ್ದಾಗಿದೆ. ಕ್ಯಾ.ಆರ್.ಡಿ.ಪಾಯಸ್ ಹಾಗೂ ಕ್ಯಾ.ರಜನಿಕಾಂತ್ ಈ ಹಡಗಿನ ಪೈಲಟ್‌ಗಳಾಗಿದ್ದಾರೆ.