ಮಂಗಳೂರು: ಅಕ್ರಮ ವಲಸಿಗರ ಪತ್ತೆ ಕಾರ್ಯಾಚರಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 04. ನಗರದಲ್ಲಿ ಕಳೆದ ಒಂದು ವಾರದಿಂದ ನಡೆಸಲಾದ ಕಾರ್ಯಾಚರಣೆಯ ವೇಳೆ ಸೂಕ್ತ ದಾಖಲೆಗಳನ್ನು ಹೊಂದಿರದ ಸುಮಾರು 300 ಮಂದಿ ವಲಸಿಗರನ್ನು ಪತ್ತೆ ಹಚ್ಚಲಾಗಿದೆ ಎಂದು ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

ಅವರೆಲ್ಲರೂ ನಿಖರವಾಗಿ ಅಕ್ರಮ ವಲಸಿಗರು ಎಂದು ಹೇಳಲಾಗದಿದ್ದರೂ, ಈವರೆಗಿನ ಪರಿಶೀಲನೆ ಸಂದರ್ಭ ಸೂಕ್ತ ದಾಖಲೆ ನೀಡುವಲ್ಲಿ ವಿಫಲರಾಗಿದ್ದಾರೆ. ಈ ಪೈಕಿ 250 ಮಂದಿಯನ್ನು ನಗರದ ರೊಸಾರಿಯೊ ಸಭಾಂಗಣಕ್ಕೆ ಕರೆತರಲಾಗಿದ್ದು, ಇಂದು ಅವರೆಲ್ಲರ ದಾಖಲೆಗಳ ಬಗ್ಗೆ ಅಂತಿಮ ಪರಿಶೀಲನೆ ನಡೆಯಲಿದೆ ಎಂದು ಹೇಳಿದ್ದಾರೆ.

Also Read  ರಾಜ್ಯದಲ್ಲಿ ಮತ್ತೆ ಲಾಕ್‌ಡೌನ್ ಜಾರಿಯಾಗಲ್ಲ➤ ಮುಂದಿನ ದಿನದಲ್ಲಿ ಮತ್ತಷ್ಟು ಸಡಿಲಿಕೆ

error: Content is protected !!
Scroll to Top