(ನ್ಯೂಸ್ ಕಡಬ) newskadaba.com ಕಾವು, ಜು. 04. ಭಾನುವಾರ ರಾತ್ರಿ ಬೀಸಿದ ಗಾಳಿಗೆ ಬೃಹತ್ ಗಾತ್ರದ ಮರವೊಂದು ಮುರಿದುಬಿದ್ದ ಪರಿಣಾಮ ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡ ಘಟನೆ ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾವು ಕುಡ್ಪುನಡ್ಕ ಎಂಬಲ್ಲಿ ನಡೆದಿದೆ.
ಬೃಹತ್ ಮರದ ಜೊತೆಗೆ ವಿದ್ಯುತ್ ಕಂಬಗಳೂ ಮುರಿತಕ್ಕೊಳಗಾಗಿ ವಿದ್ಯುತ್ ಸಂಪರ್ಕವೂ ಕಡಿತಗೊಂಡಿದೆ. ರಸ್ತೆ ಬದಿಯಲ್ಲಿನ ಮರವೊಂದು ಗಾಳಿಗೆ ಮುರಿದು ಬಿದ್ದಿದರಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆಯಾಗಿದ್ದು, ಅರಣ್ಯ ಮತ್ತು ಮೆಸ್ಕಾಂ ಇಲಾಖೆಯವರು ಸಾರ್ವಜನಿಕರ ಸಹಕಾರದೊಂದಿಗೆ ಮರ ತೆರವು, ವಿದ್ಯುತ್ ಕಂಬಗಳ ಮರು ಜೋಡಣೆ ಕಾರ್ಯ ಮಾಡುತ್ತಿರುವುದಾಗಿ ತಿಳಿದುಬಂದಿದೆ.