(ನ್ಯೂಸ್ ಕಡಬ) newskadaba.com ಬಂಟ್ವಾಳ, ಜು. 04. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿಟ್ಲಮುಡ್ನೂರು ಗ್ರಾಮದ ಪಿಲಿಂಜ ಎಂಬಲ್ಲಿ ತೋಡಿನ ಬದಿ ಕುಸಿದು ಮನೆಯೊಂದು ಅಪಾಯದಂಚಿನಲ್ಲಿದೆ.
ವಿಟ್ಲಮುಡ್ನೂರು ಗ್ರಾಮದ ಪಿಲಿಂಜ ನಿವಾಸಿ ರಾಮಣ್ಣ ಎಂಬವರ ಮನೆ ಪಕ್ಕದಲ್ಲಿ ತೋಡು ಇದ್ದು, ವಿಪರೀತ ಮಳೆಗೆ ಅದರ ಬದಿ ಕುಸಿದಿದೆ. ಇದರಿಂದ ಮನೆಯ ಗೋಡೆ ಬಿರುಕುಬಿಟ್ಟಿದ್ದು, ಅಪಾಯದಂಚಿನಲ್ಲಿದೆ.