ಪುತ್ತೂರು: ಬೈಕ್ ಹಾಗೂ ಓಮ್ನಿ ಕಾರಿನ ನಡುವೆ ಭೀಕರ ಅಪಘಾತ ➤ ತಂದೆ ಮೃತ್ಯು, ಮಗ ಗಂಭೀರ

(ನ್ಯೂಸ್ ಕಡಬ) newskadaba.com
ಪುತ್ತೂರು, ಜು. 04. ಓಮ್ನಿ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ತಂದೆ ಮೃತಪಟ್ಟು, ಮಗ ಗಂಭೀರ ಗಾಯಗೊಂಡ ಘಟನೆ ಪುತ್ತೂರು ಸಮೀಪದ ಕುಂಬ್ರದಲ್ಲಿ ಭಾನುವಾರ ರಾತ್ರಿ ನಡೆದಿದೆ.


ಮೃತಪಟ್ಟವರನ್ನು ಪಂಜಿಗುಡ್ಡೆ ನಿವಾಸಿ ರಘುರಾಮ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ತನ್ನ ಮಗನನ್ನು ಬೆಂಗಳೂರು ಬಸ್ ಗೆ ಬಿಡಲೆಂದು ಮನೆಯಿಂದ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಪುತ್ತೂರು ಸಂಚಾರ ಪೊಲೀಸ್ ಠಾಣಾ ಸಿಬ್ಬಂದಿ ಶೀನಪ್ಪರವರು ಚಲಾಯಿಸುತ್ತಿದ್ದ ಮಾರುತಿ ಓಮ್ನಿ ನಡುವೆ ಡಿಕ್ಕಿ ಸಂಭವಿಸಿದ್ದು, ಪರಿಣಾಮ ಸವಾರರಿಬ್ಬರು ಗಂಭೀರ ಗಾಯಗೊಂಡಿದ್ದರು. ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ತಂದೆ ರಘುರಾಮ ಶೆಟ್ಟಿ ಅವರು ಮೃತಪಟ್ಟಿದ್ದಾರೆ. ಪುತ್ರನ ಕಾಲು ಮುರಿತಕ್ಕೊಳಗಾಗಿದ್ದು ಅವರನ್ನು ಮಂಗಳೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

Also Read  ಆಯಿಶಾ ಕಾಲೇಜು ಆತೂರು ಶೇ. 100 ಫಲಿತಾಂಶ

error: Content is protected !!
Scroll to Top