ಸುಳ್ಯದಲ್ಲಿ ಮತ್ತೆ ಭೂಕಂಪನ ➤ ಮನೆಗಳಿಗೆ ಹಾನಿ

(ನ್ಯೂಸ್ ಕಡಬ) newskadaba.com ಪುತ್ತೂರು, ಜು. 02. ಸುಳ್ಯ ನಗರದ ಹೊರವಲಯದಲ್ಲಿ ಇಂದು ಮತ್ತೆ ಭೂಕಂಪನವಾಗಿದ್ದು, ಮನೆ ಗೋಡೆಗಳು ನೆಲಸಮವಾದ ಘಟನೆಗಳು ವರದಿಯಾಗಿವೆ.

ಒಂದೇ ದಿನ ಎರಡನೇ ಬಾರೀ ಭೂಮಿ ಕಂಪಿಸಿದ್ದು ಕೆಲದಿನಗಳಿಂದ ಗಡಿ ಪ್ರದೇಶದಲ್ಲಿ ಹಲವೆಡೆ ಇಂತಹ ದುರ್ಘಟನೆಗಳು ನಡೆಯುತ್ತಿದ್ದು, ಇದರಿಂದ ಆತಂಕಿತರಾದ ಸಾರ್ವಜನಿಕರು, ಬೇರೆ ಕಡೆಗೆ ವಲಸೆ ಹೋಗುತ್ತಿದ್ದಾರೆ. ಈ ಕುರಿತು ಆತಂಕಕ್ಕೊಳಗಾದ ಜನರಿಗೆ ಜಿಲ್ಲಾಧಿಕಾರಿ ಯಾವುದೇ ಸಮಸ್ಯೆಯಿದ್ದರೂ ನಾವು ಸ್ಪಂದಿಸುತ್ತೇವೆ ಎಂದು ಭರವಸೆ ನೀಡಿದ್ದಾರೆ. ಕಳೆದ ಭಾರಿ ಕೊಡಗಿನಲ್ಲಿ ಭೂಕುಸಿತಕ್ಕೂ ಮುಂಚೆ ಭೂಕಂಪನವಾಗಿದ್ದು, ಈ ಬಾರಿಯೂ ಮಳೆಗಾಲದಲ್ಲಿ ಏನಾದರೂ ಅನಾಹುತ ಸಂಭವಿಸಬಹುದು ಎಂದು ಜನರು ಭಯಭೀತರಾಗಿದ್ದಾರೆ.

Also Read  ಟಿಪ್ಪರ್‌ ಡಿಕ್ಕಿಯಾಗಿ RSS‌‌ ಹಿರಿಯ ಕಾರ್ಯಕರ್ತನ ಮೃತ್ಯು ಪ್ರಕರಣ ➤ ಪರಾರಿಯಾಗಿದ್ದ ಟಿಪ್ಪರ್‌ ಚಾಲಕನ ಬಂಧನ

error: Content is protected !!
Scroll to Top