ಗಲ್ಫ್ ಉದ್ಯೋಗಿ ಸಿದ್ದೀಕ್ ಕೊಲೆ ಪ್ರಕರಣ ➤ ಮತ್ತೆ ಮೂವರ ಬಂಧನ- ಬಂಧಿತರ ಸಂಖ್ಯೆ ಐದಕ್ಕೇರಿಕೆ

(ನ್ಯೂಸ್ ಕಡಬ) newskadaba.com ಕಾಸರಗೋಡು, ಜು. 01. ಗಲ್ಫ್ ಉದ್ಯೋಗಿ ಸೀತಾಂಗೋಳಿ ನಿವಾಸಿ ಅಬೂಬಕ್ಕರ್ ಸಿದ್ದಿಕ್ ರವರ ಕೊಲೆಗೆ ಸಂಬಂಧಪಟ್ಟಂತೆ ವಿಶೇಷ ತನಿಖಾ ತಂಡವು ಮೂವರನ್ನು ಬಂಧಿಸಿದ್ದು, ಇದೀಗ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಐದಕ್ಕೇರಿದೆ.

ಬಂಧಿತರನ್ನು ಮಂಜೇಶ್ವರ ಉದ್ಯಾವರದ ರಿಯಾಜ್ ಹಸನ್ ( 33), ಉಪ್ಪಳ ಬಿ.ಟಿ ರಸ್ತೆಯ ಅಬ್ದುಲ್ ರಜಾಕ್( 46) ಮತ್ತು ಕುಂಜತ್ತೂರಿನ ಅಬೂಬಕ್ಕರ್ ಸಿದ್ದಿಕ್( 33) ಎಂದು ಗುರುತಿಸಲಾಗಿದೆ. ಜೂನ್ 29 ರಂದು ಅಬೂಬಕ್ಕರ್ ಸಿದ್ದೀಕ್ ನನ್ನು ತಂಡವು ಅಪಹರಿಸಿ ಕೊಲೆಗೈಯ್ದು ಬಳಿಕ ಮೃತದೇಹವನ್ನು ಬಂದ್ಯೋಡಿನ ಖಾಸಗಿ ಆಸ್ಪತ್ರೆಯಲ್ಲಿ ತೊರೆದು ಪರಾರಿಯಾಗಿತ್ತು. ಈ ಕೃತ್ಯದಲ್ಲಿ ಶಾಮೀಲಾಗಿರುವ ಇನ್ನೂ ಐದಕ್ಕೂ ಅಧಿಕ ಮಂದಿ ತಲೆಮರೆಸಿಕೊಂಡಿದ್ದು ಇವರಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Also Read  ರಸ್ತೆ ಅಪಘಾತ: ಸವಾರನಿಗೆ ಗಂಭೀರ ಗಾಯ

error: Content is protected !!
Scroll to Top