ಯೋಗದಲ್ಲಿ ಸಾಧನೆ ಗುರುತಿಸಿ ಪಂಜದ ಸಾನ್ವಿ ಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಜು. 01. ಆಮಂತ್ರಣ ಸಂಸ್ಥೆ ಶ್ರಮಿಕಾ ಸೇವಾ ಟ್ರಸ್ಟ್ ಬೆಳ್ತಂಗಡಿ ಇವರ ಸಾರಥ್ಯದಲ್ಲಿ ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ ಇವರ ಸಹಕಾರದಲ್ಲಿ ಕಾರ್ಕಳ ಪೆರ್ವಾಜೆ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿವಿಧ ರಂಗದ ಪ್ರತಿಭೆಗಳನ್ನು ಗೌರವಿಸುವ “ಕಲಾ ಆರಾಧನೆ- 2022” ಕಾರ್ಯಕ್ರಮದಲ್ಲಿ ಪಂಜ ದೊಡ್ಡಮನೆ ಸಾನ್ವಿಯವರನ್ನು ಯೋಗದಲ್ಲಿನ ಸಾಧನೆಯನ್ನು ಗುರುತಿಸಿ ಸನ್ಮಾನಿಸಲಾಯಿತು.

ಈಕೆ ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಐದನೇ ತರಗತಿ ವಿದ್ಯಾರ್ಥಿನಿ. ಕಡಬ ಶ್ರೀ ಮೂಕಾಂಬಿಕಾ ಮಾರುತಿ ಆಟೋ ವರ್ಕ್ಸ್ ನ ಮಾಲಕ ನಿತ್ಯಾನಂದ ದೊಡ್ಡಮನೆ ಮತ್ತು ಸೀತಾಲಕ್ಷ್ಮಿ ದಂಪತಿಯ ಪುತ್ರಿ.

Also Read  ಕೋವಿಡ್ ಸೋಂಕಿಗೆ ಮಾಜಿ ಶಾಸಕ ಬಲಿ

error: Content is protected !!
Scroll to Top