ಬೆಳ್ತಂಗಡಿ: ಅಚ್ಚರಿ ಮೂಡಿಸಿದ ಕೆಂಪು ಮಳೆ..!!

(ನ್ಯೂಸ್ ಕಡಬ) newskadaba.com ಶಿರ್ಲಾಲು, ಜು. 01. ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಬಳ್ಳಿದಡ್ಡ ಮನೆಯ ಸೂರ್ಯನಾರಾಯಣ ಭಟ್ ಅವರ ಮನೆಯಲ್ಲಿ ಕೆಂಪು ಮಳೆಯಾದ ಘಟನೆ ನಡೆದಿದೆ.


ಇವರ ಮನೆಗೆ ಅಳವಡಿಸಲಾಗಿದ್ದ ಮೇಲ್ಛಾವಣಿಯಿಂದ ಹರಿದು ಬಂದ ಮಳೆ ನೀರು ಬಕೆಟ್ ಹಾಗೂ ಡ್ರಮ್ ಗಳಲ್ಲಿ ಕೆಂಪು ಬಣ್ಣದಲ್ಲಿ ತುಂಬಿಕೊಂಡಿದ್ದು ಬೆಳಕಿಗೆ ಬಂದಿದೆ. ಈ ನೀರನ್ನು ಇಗಾಗಲೇ ಸಂಶೋಧನಾ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಕಂಪು ಮಳೆ ನೀರಿನ ಬಗ್ಗೆ ಇನ್ನಷ್ಟೇ ವರದಿ ಬರಬೇಕಾಗಿದೆ. ಈ ಬಗ್ಗೆ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದ್ದು ಲ್ಯಾಬ್ ವರದಿಗಾಗಿ ಕಾಯುತ್ತಿದ್ದಾರೆ ಎನ್ನಲಾಗಿದೆ.

Also Read  ಮಲಯಾಳಂ ನ ಹಿರಿಯ ನಟ ಕೆ.ಎಸ್. ಪ್ರೇಮ್ ಕುಮಾರ್ ವಿಧಿವಶ

error: Content is protected !!
Scroll to Top