ಕೇಂದ್ರದ ಬಗ್ಗೆ ಅಪಹಾಸ್ಯ ಮಾಡಲು ಮೋದಿಯವರಿಗೆ ನಾಚಿಗೆಯಾಗಬೇಕು ► ಎಡವಟ್ಟು ಮಾಡಿಕೊಂಡ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ

(ನ್ಯೂಸ್ ಕಡಬ) newskadaba.com ಮಂಗಳೂರು, ನ.11. ಕೇಂದ್ರದ ಬಗ್ಗೆ ಅಪಹಾಸ್ಯ ಮಾಡಲು ನರೇಂದ್ರ ಮೋದಿಯವರಿಗೆ ನಾಚಿಗೆಯಾಗಬೇಕು ಎಂದು ಕೇಂದ್ರ ಸಚಿವ ಡಿವಿ ಸದಾನಂದ ಗೌಡ ಹೇಳುವ ಮೂಲಕ ಪಕ್ಷದಲ್ಲಿ ಮುಜುಗರವನ್ನುಂಟುಮಾಡಿದ್ದಾರೆ.

ಬಿಜೆಪಿ ಪರಿವರ್ತನಾ ಯಾತ್ರೆಯ ಬಂಟ್ವಾಳದಲ್ಲಿ ನಡೆದ ಸಮಾವೇಶದಲ್ಲಿ ಮಾತಣಾಡಿದ ಕೇಂದ್ರ ಸಚಿವ ಡಿವಿ ಸದಾನಂದ ಗೌಡ, ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಕೇಂದ್ರದ ಬಗ್ಗೆ ಅಪಹಾಸ್ಯ ಮಾಡಲು ನರೇಂದ್ರ ಮೋದಿಯವರಿಗೆ ನಾಚಿಗೆಯಾಗಬೇಕು ಎಂದು ಹೇಳಿದರು. ಶುಕ್ರವಾರದಂದು ಸುಳ್ಯದಲ್ಲಿ ನಡೆದ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾವೇಶದಲ್ಲಿ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಡಿ.ವಿ.ಸದಾನಂದ ಗೌಡ ರವರು ಹಿಂದೂ ಕಾರ್ಯಕರ್ತರ ಕೊಲೆ ಮಾಡುತ್ತಿದ್ಧಾರೆ ಎಂದು ಹೇಳುವ ಮೂಲಕ ಬಳ್ಳಾರಿ ಸಂಸದ ಶ್ರೀರಾಮುಲುರವರು ಎಡವಟ್ಟು ಮಾಡಿಕೊಂಡಿದ್ದರು.

Also Read  ಆರ್‌.ಆರ್ ‌ನಗರದಲ್ಲಿ ಹ್ಯಾಟ್ರಿಕ್‌ ಸಾಧನೆಗೈದ ಮುನಿರತ್ನ

 

error: Content is protected !!
Scroll to Top