ಅರಂತೋಡು: ಕಾಲೇಜು ವಿದ್ಯಾರ್ಥಿ ಸಂಸತ್ತಿನ ಚುನಾವಣೆ ➤ ನಾಯಕನಾಗಿ ಪುನೀತ್ ಕೆ.ಎಸ್, ಮೂವಿತ ಬಿ.ವಿ ಉಪನಾಯಕಿಯಾಗಿ ಆಯ್ಕೆ

(ನ್ಯೂಸ್ ಕಡಬ) newskadaba.com ಅರಂತೋಡು, ಜು. 01. ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ 2022ನೇ ಸಾಲಿನ ವಿದ್ಯಾರ್ಥಿ ಸಂಸತ್ತಿನ ಚುನಾವಣೆ ಇತಿಹಾಸ ಉಪನ್ಯಾಸಕ ಶ್ರೀ ಮೋಹನ್ ಚಂದ್ರ ಮತ್ತು ರಾಜ್ಯಶಾಸ್ತ್ರ ಉಪನ್ಯಾಸಕ ಶ್ರೀ ಪದ್ಮಕುಮಾರ್ ನೇತೃತ್ವದಲ್ಲಿ ನಡೆಯಿತು.

ತರಗತಿ ಪ್ರಕಾರ ಮತಗಟ್ಟೆ ಮಾಡಿ, ವಿದ್ಯಾರ್ಥಿಗಳನ್ನು ಮತಗಟ್ಟೆ ಅಧಿಕಾರಿಗಳಾಗಿ ನೇಮಕ ಮಾಡಲಾಗಿತ್ತು. ಮತಗಟ್ಟೆಯ ಚುನಾವಣಾ ವೀಕ್ಷಕರಾಗಿ ಶ್ರೀ ಸುರೇಶ್ ವಾಗ್ಲೆ, ಶ್ರೀ ಲಿಂಗಪ್ಪ ಎಂ, ಶ್ರೀಮತಿ ಭಾಗ್ಯಶ್ರೀ, ಶ್ರೀಮತಿ ಅಶ್ವಿನಿ, ಶ್ರೀಮತಿ ವಿದ್ಯಾಶಾಲಿ , ಶ್ರೀಮತಿ ನಂದಿನಿ, ಶ್ರೀಮತಿ ಶಾಂತಿ ಮತ್ತು ಕುಮಾರಿ ನಯನಾ ಕರ್ತವ್ಯ ನಿರ್ವಹಿಸಿದರು. ಕಲಾ ವಿಭಾಗದ ಪುನೀತ್ ಕೆ.ಎಸ್, ವಾಣಿಜ್ಯ ವಿಭಾಗದ ಯಕ್ಷಿತ್ ಎಂ ಮತ್ತು ಉಬೈಸ್ ಪಿ.ಯು ನಾಯಕ ಸ್ಥಾನಕ್ಕೆ ಮತ್ತು ಕಲಾ ವಿಭಾಗದ ವಷಿಕಾ ಯು.ಆರ್ ಮತ್ತು ವಿಜ್ಞಾನ ವಿಭಾಗದ ಮೂವಿತ ಬಿ.ವಿ. ಉಪನಾಯಕಿ ಸ್ಥಾನಕ್ಕೆ ಸ್ಪರ್ಧಿಸಿದರು. ಜೀವಶಾಸ್ತ್ರ ಉಪನ್ಯಾಸಕರಾದ ಶ್ರೀ ಗೌರಿಶಂಕರ ನೇತೃತ್ವದಲ್ಲಿ ಮತ ಎಣಿಕೆ ನಡೆಯಿತು. ದ್ವಿತೀಯ ಪಿಯುಸಿ ಕಲಾ ವಿಭಾಗದ ಪುನೀತ್ ಕೆ.ಎಸ್. ವಿದ್ಯಾರ್ಥಿ ನಾಯಕ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಮೂವಿತ ಬಿ.ವಿ ಉಪನಾಯಕಿಯಾಗಿ ಆಯ್ಕೆಯಾದರು. ಪ್ರಾಂಶುಪಾಲರಾದ ಶ್ರೀ ರಮೇಶ್ ಮಾರ್ಗದರ್ಶನ ನೀಡಿದರು. ಕಛೇರಿ ಸಿಬ್ಬಂದಿ ಶ್ರೀ ಧನ್ಯರಾಜ್, ಶ್ರೀ ಚಿದಾನಂದ, ಶ್ರೀಮತಿ ಬೃಂದಾ, ಶ್ರೀ ಚಂದ್ರಶೇಖರ ಮತ್ತು ಶ್ರೀವಿಜಯ್ ಸಹಕರಿಸಿದರು.

Also Read  ಇಂದು ಕಡಬದಲ್ಲಿ 17 ನೆ ಕನ್ನಡ ಸಾಹಿತ್ಯ ಸಮ್ಮೇಳನ ► ಭಾಗವಹಿಸುವ ಉಪನ್ಯಾಸಕರಿಗೆ ಒ.ಒ.ಡಿ ಸೌಲಭ್ಯ

error: Content is protected !!
Scroll to Top