ಜುಲೈ 10ರಂದು ಈದುಲ್ ಅಝ್ಹಾ ➤ ದ.ಕ, ಉಡುಪಿ ಖಾಝಿಗಳಿಂದ ಘೋಷಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜು. 01. ಕಲ್ಲಿಕೋಟೆಯಲ್ಲಿ ಗುರುವಾರ ರಾತ್ರಿ ದುಲ್ಹಜ್ ಚಂದ್ರದರ್ಶನವಾಗಿದ್ದು, ಜುಲೈ 1ರಂದು ದುಲ್ಹಜ್ ತಿಂಗಳು ಆರಂಭವಾಗಲಿದೆ. ಹಾಗಾಗಿ ಜುಲೈ 10ರಂದು ಈದುಲ್ ಅಝ್‌ಹಾ (ಬಕ್ರೀದ್) ಆಚರಿಸಲು ದ.ಕ.ಜಿಲ್ಲಾ ಖಾಝಿ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ನಿರ್ಧರಿಸಿದ್ದಾರೆ ಎಂದು ಮಸ್ಜಿದ್ ಝೀನತ್ ಬಕ್ಷ್ ಹಾಗೂ ಈದ್ಗಾ ಮಸೀದಿಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಹಾಜಿ ತಿಳಿಸಿದ್ದಾರೆ.


ಜುಲೈ 10ರಂದು ಈದುಲ್ ಅಝ್‌ಹಾ (ಬಕ್ರೀದ್) ಆಚರಿಸಲಾಗುವುದು ಎಂದು ಉಡುಪಿ ಜಿಲ್ಲಾ ಖಾಝಿ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Also Read  ವಿಟ್ಲ: ಇಂದು ರಕ್ತದಾನ ಶಿಬಿರ

error: Content is protected !!
Scroll to Top