ಸುಳ್ಯ: ನಡುರಾತ್ರಿ ಮತ್ತೆ ಕಂಪಿಸಿದ ಭೂಮಿ ➤ ವಾರದಲ್ಲಿ ನಾಲ್ಕನೇ ಬಾರಿ ಭೂಕಂಪನ

(ನ್ಯೂಸ್ ಕಡಬ) newskadaba.com ಸುಳ್ಯ, ಜು. 01. ಕೊಡಗು ಸಂಪಾಜೆ, ದಕ್ಷಿಣ ಕನ್ನಡ ಸಂಪಾಜೆ, ಚೆಂಬು, ಕಲ್ಲುಗುಂಡಿ ಗಡಿಭಾಗ ಸೇರಿದಂತೆ ಸುಳ್ಯ ತಾಲೂಕಿನ ವಿವಿಧ ಕಡೆ ಮತ್ತೊಮ್ಮೆ ಶುಕ್ರವಾರ ತಡರಾತ್ರಿ 1.15 ಕ್ಕೆ ಭಾರೀ ಶಬ್ಧದೊಂದಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.

ಆಗಷ್ಟೇ ಗಾಢ ನಿದ್ರೆಯಲ್ಲಿದ್ದ ಜನರನ್ನು ಭೂಕಂಪ ಏಕಾಏಕಿ ಬಡಿದೆಬ್ಬಿಸಿದೆ.‌ ಮೊದಲಿಗೆ ಭಾರೀ ಶಬ್ಧ ಕೇಳಿ ಬಂದು, ನಂತರ ಒಮ್ಮೆಗೆ ಸುಮಾರು 2 ಸೆಕೆಂಡ್ ಗಳ ಕಾಲ ನೆಲ ನಡುಗಿದೆ. ಪ್ರಾಣಭಯದಿಂದ ಜನರು ಹೆದರಿ ಮನೆಯಿಂದ ಹೊರಕ್ಕೆ ಓಡಿ ಬಂದಿದ್ದಾರೆ. ಕಳೆದ ಒಂದು ವಾರದೊಳಗೆ ಕೊಡಗು ಹಾಗೂ ಸುಳ್ಯ ತಾಲೂಕಿನ ವಿವಿಧ ಕಡೆ ನಾಲ್ಕನೇ ಬಾರಿ ಭೂಮಿ ಕಂಪಿಸಿದ ಅನುಭವವಾಗುತ್ತಿದ್ದು, ಸದ್ಯ ಜನರು ಆತಂಕಕ್ಕೆ ಒಳಗಾಗಿದ್ದಾರೆ.

Also Read  ಶರಣ್ ಪಂಪ್ ವೆಲ್ ವಿರುದ್ದ ಸುಳ್ಳು ಸುದ್ದಿ- ಕಠಿಣ ಕ್ರಮ ಜರುಗಿಸದಿದ್ದಲ್ಲಿ ಉಗ್ರ ಹೋರಾಟ ➤ ಹಿಂದೂ ಸಂಘಟನೆಗಳ ಎಚ್ಚರಿಕೆ..❗

error: Content is protected !!
Scroll to Top