ಬೆಳ್ತಂಗಡಿ: ರಿಕ್ಷಾ ಚಾಲಕನಿಗೆ ಹಲ್ಲೆ..!!

(ನ್ಯೂಸ್ ಕಡಬ) newskadaba.com ಬೆಳ್ತಂಗಡಿ, ಜೂ. 30. ಮುಸ್ಲಿಂ ರಿಕ್ಷಾ ಚಾಲಕರೋರ್ವರಿಗೆ ಸಂಘಪರಿವಾರದ ಕಾರ್ಯಕರ್ತರು ಹಲ್ಲೆ ನಡೆಸಿರುವ ಘಟನೆ ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಹಲ್ಲೆಗೊಳಗಾದ ಚಾಲಕನನ್ನು ಉಮರಬ್ಬ ಎಂದು ಗುರುತಿಸಲಾಗಿದೆ. ಇವರು ಸುರಿಯಾ ಜನಾರ್ಧನ ದೇವಸ್ಥಾನದ ಬಳಿ ಆಟೋ ರಿಕ್ಷಾ ನಿಲ್ಲಿಸಿದಕ್ಕೆ ಸುಮೋ ಚಾಲಕರೋರ್ವರು ತಗಾದೆ ತೆಗೆದಿದ್ದು, ಈ ಸಂದರ್ಭ ಇವರಿಬ್ಬರಿಗೂ ಮಾತಿನ ಚಕಮಕಿ ನಡೆದಿದೆ. ನಂತರ ಸ್ಥಳಕ್ಕೆ ಧಾವಿಸಿದ ಉಜಿರೆಯ ಇತರ ಆಟೋ ಚಾಲಕರು ಉಮರಬ್ಬ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಇವರನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Also Read  ಪಾವಂಜೆ ಸೇತುವೆಯಲ್ಲಿ ಸರಣಿ ಅಪಘಾತ ; ಮಹಿಳೆಗೆ ಗಾಯ

 

error: Content is protected !!
Scroll to Top