ಸುಳ್ಯ: ಮಗುವನ್ನು ಸೊಂಟಕ್ಕೆ ಕಟ್ಟಿಕೊಂಡು ತಾಯಿ ಬಾವಿಗೆ ಹಾರಿದ ಪ್ರಕರಣಕ್ಕೆ ಟ್ವಿಸ್ಟ್…!! ➤ ಅತ್ತೆ ಸಹಿತ ಮೂವರ ವಿರುದ್ದ ಕೇಸು ದಾಖಲು

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 30. ಇಲ್ಲಿನ ದೇವಚಳ್ಳ ಗ್ರಾಮದ ತಳೂರು ಎಂಬಲ್ಲಿ ಮಗುವನ್ನು ಕಟ್ಟಿಕೊಂಡು ತಾಯಿಯೋರ್ವರು ಕೆರೆಗೆ ಹಾರಿದ ಪ್ರಕರಣಕ್ಕೆ ಟ್ವಿಸ್ಟ್ ಪಡೆದುಕೊಂಡಿದೆ.


ಘಟನೆಗೆ ಸಂಬಂಧಿಸಿ ಮೃತಳ ಅತ್ತೆ, ಮೈದುನ ಹಾಗೂ ಮೈದುನನ ಹೆಂಡತಿಯ ವಿರುದ್ದ ಪ್ರಕರಣ ದಾಖಲಾಗಿದೆ. ಅಗ್ನಿಶಾಮಕ ದಳ ಸಿಬ್ಬಂದಿ ಸ್ಮಾರಕ ದಯಾನಂದ ಎಂಬವರ ಪತ್ನಿ ಗೀತಾ ಮೃತಪಟ್ಟರೆ, ಮಗಳು ಅದೃಷ್ಟವಶಾತ್ ಪಾರಾಗಿದ್ದಾಳೆ. ಈ ಕುರಿತು ಮೃತರ ತಾಯಿ ಸುಬ್ರಹ್ಮಣ್ಯ ಠಾಣೆಗೆ ದೂರು ನೀಡಿದ್ದು, ಗೀತಾಳ ಅತ್ತೆ ಸೀತಮ್ಮ, ಮೈದುನ ಜಯಪ್ರಕಾಶ್ ಹಾಗೂ ಆತನ ಪತ್ನಿ ನಿಶ್ಮಿತಾ ಕಳೆದ ಎರಡು ವರ್ಷದಿಂದ ಆಕೆಗೆ ಕಿರುಕುಳ ನೀಡುತ್ತಿದ್ದು, ಸಣ್ಣಪುಟ್ಟ ವಿಷಯಕ್ಕೂ ಜಗಳವಾಡುತ್ತಾರೆ. ಒಂದೇ ಮನೆಯಲ್ಲಿದ್ದರೂ ಈ ಮೂರು ಜನ ಮಗಳ ಜತೆ ಮಾತುಕತೆ ನಿಲ್ಲಿಸಿದ್ದರು ಎಂದು ತಿಳಿಸಿದ್ದಾರೆ. ಹೀಗಾಗಿ ಅತ್ತೆ ಗೀತಾ, ಮೈದುನ ಹಾಗೂ ಆತನ ಹೆಂಡತಿಯ ಮಾನಸಿಕ ಕಿರುಕುಳ ಅಥವಾ ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದ್ದು, ಅದರಂತೆ ಮೂವರ ವಿರುದ್ದ ಐಪಿಸಿ ಸೆಕ್ಷನ್ 1860, 304ಬಿ, 306ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Also Read  ಮಂಗಳೂರು: ಬೈಕ್ ಅಪಘಾತ; ಯುವಕ ಮೃತ್ಯು

error: Content is protected !!
Scroll to Top