(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 30. ಕಳೆದ ಜೂ. 24ರಂದು ರಾತ್ರಿ ಪೆರಾಬೆ ಗ್ರಾ.ಪಂ. ಅಧ್ಯಕ್ಷರ ಸಹಿತ ಮೂವರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದ ಮೂವರು ಆರೋಪಿಗಳು ನ್ಯಾಯಾಲಯಕ್ಕೆ ಶರಣಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದಾರೆ.
ಪೆರಾಬೆ ಗ್ರಾ.ಪಂ ಅಧ್ಯಕ್ಷ ಮೋಹನ್ ದಾಸ್ ರೈ ಸಹಿತ ಮೂವರು ಕಾರಿನಲ್ಲಿ ತೆರಳುತ್ತಿದ್ದ ವೇಳೆ ಏಳು ಮಂದಿಯ ತಂಡವೊಂದು ಅವರನ್ನು ಹೊರಕ್ಕೆಳೆದು ಕತ್ತಿಯಿಂದ ಹಲ್ಲೆ ನಡೆಸಿತ್ತು ಎಂದು ಆರೋಪಿಸಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಪೆರಾಬೆ ಆದಂ ಎಂಬವರ ಮಗ ಜುಬೈರ್, ಕೋಚಕಟ್ಟೆ ಅಬ್ದುಲ್ ಖಾದರ್ ಎಂಬವರ ಮಗ ಮೊಯಿದು ಕುಂಞಿ ಎಂಬವರನ್ನು ಪೊಲೀಸರು ಬಂಧಿಸಿದ್ದರು. ಇತರ ಆರೋಪಿಗಳಾದ ಕುಂತೂರು ಎರ್ಮಾಲ ಅಬ್ದುಲ್ಲ ಎಂಬವರ ಮಗ ಕೆ.ರಾಝಿಕ್, ಬೇಳ್ಪಾಡಿ ಆದಂ ಎಂಬವರ ಮಗ ಝುನೈದ್, ಹಾಗೂ ಕೋಚಕಟ್ಟೆ ಮೊಹಮ್ಮದ್ ಶಫಿ ಎಂಬವರ ಮಗ ಅಬ್ದುಲ್ ರಹಿಮಾನ್ ಯಾನೆ ಅಮಾನ್ ಎಂಬವರು ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಲಯವು ಇದೀಗ ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಆರೋಪಿಗಳ ಪರ ವಕೀಲರಾದ ಸಂತೋಷ್ ಕುಮಾರ್, ಕು.ಹರ್ಷಿತಾ, ಕು.ನಮಿತಾ ವಾದಿಸಿದ್ದರು.