(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ. 30. ಇಲ್ಲಿನ ಗ್ರಾ.ಪಂ. ವತಿಯಿಂದ ಕಾರ್ಯಾಚರಣೆ ನಡೆಸಿ, ಸುಬ್ರಹ್ಮಣ್ಯದಲ್ಲಿ ಬಿಕ್ಷೆ ಬೇಡುತ್ತಿದ್ದ 16 ಬಿಕ್ಷುಕರನ್ನು ಪುನರ್ವಸತಿ ಕೇಂದ್ರಕ್ಕೆ ರವಾನಿಸಲಾಗಿದೆ.
ಮಂಗಳೂರಿನ ಪುನರ್ವಸತಿ ಕೇಂದ್ರವನ್ನು ಸಂಪರ್ಕಿಸಿದ ಸುಬ್ರಹ್ಮಣ್ಯ ಗ್ರಾ.ಪಂ ಪಿಡಿಒ, ಗ್ರಾ.ಪಂ ಆಡಳಿತ ಮಂಡಳಿಯ ಸಹಕಾರದಲ್ಲಿ ಬಿಕ್ಷುಕರನ್ನು ಕಲೆ ಹಾಕಿ ಪುನರ್ವಸತಿ ಕೇಂದ್ರದವರನ್ನು ಕರೆಸಿ ಬುಧವಾರದಂದು ಬೆಳಗ್ಗೆಯಿಂದ ಕೆಲಸ ಆರಂಭಿಸಿದ್ದಾರೆ. ಪುನರ್ವಸತಿ ಕೇಂದ್ರದಿಂದ ಬಂದ ವಾಹನದಲ್ಲಿ ಸುಬ್ರಹ್ಮಣ್ಯ ಪೇಟೆಯಾದ್ಯಂತ ಅಲ್ಲಲ್ಲಿ ಬಿಕ್ಷೆ ಬೇಡುತಿದ್ದ16 ಜನ ಬಿಕ್ಷುಕರನ್ನು ವಾಹನದಲ್ಲಿ ಹಾಕಿ ಮಂಗಳೂರಿನ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಪಿ ಡಿ ಒ ಯು ಡಿ ಶೇಖರ್, ಗ್ರಾ.ಪಂ ಸದಸ್ಯರುಗಳಾದ ವೆಂಕಟೇಶ್ ಎಚ್ ಎಲ್, ಭಾರತಿ ದಿನೇಶ್, ಹರೀಶ್ ಇಂಜಾಡಿ, ಮೋಹನ ಗೌಡ ಕೋಟಿಗೌಡನ ಮನೆ, ನಾರಾಯಣ ಅಗ್ರಹಾರ, ಜೇಸಿ ಅಧ್ಯಕ್ಷ ದೀಪಕ್ ನಂಬಿಯಾರ್ ಪಂಚಾಯತ್ ನ ಘನ ತ್ಯಾಜ್ಯ ಸಂಪನ್ಮೂಲ ಕೇಂದ್ರದ ತೇಜಕುಮಾರ್, ಶರತ್, ಪುನರ್ವಸತಿ ಕೇಂದ್ರದ ಅಶೋಕ್ ಮತ್ತಿತರರು ಸಹಕರಿಸಿದರು.