ಎಡೆಬಿಡದೆ ಸುರಿಯುತ್ತಿರುವ ಭಾರೀ ಮಳೆ ➤ ಜಟ್ಟಿಪಳ್ಳ ಶಾಲೆಯ ಮೇಲ್ಛಾವಣಿ ಪಕ್ಕಾಸು ಮುರಿತ- ಬಿರುಕುಬಿಟ್ಟ ಗೋಡೆ..!!

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 30. ಕಳೆದೆರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸುಳ್ಯ ಜಟ್ಟಿಪಳ್ಳ ಸರಕಾರಿ‌ ಶಾಲೆಯ ಪಕ್ಕಾಸು ಮುರಿದು ಬಿದ್ದು ಹೆಂಚುಗಳು ಹುಡಿಯಾದ ಘಟನೆ ನಡೆದಿದೆ.

ಘಟನೆ ರಾತ್ರಿ ವೇಳೆ ಸಂಭವಿಸಿದ್ದರಿಂದ ಯಾವುದೇ ಜೀವಹಾನಿ ಉಂಟಾಗಿಲ್ಲ. ಪಕ್ಕಾಸು ಮುರಿದುಬಿದ್ದ ಜಾಗದಲ್ಲಿ ಗೋಡೆಯ ಮೇಲ್ಭಾಗ ಬಿರುಕುಬಿಟ್ಟಿದ್ದು, ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

error: Content is protected !!
Scroll to Top