ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 30. ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಜೂ.30ರಂದು ದ.ಕ‌ ಜಿಲ್ಲಾ ಪ್ರವಾಸವನ್ನು ಕೈಗೊಂಡಿದ್ದಾರೆ.

 

ವಿವರ ಇಂತಿದೆ:
ಅವರು ಇಂದು ಮಧ್ಯಾಹ್ನ 12.45ಕ್ಕೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ, ಅಲ್ಲಿನ ಅಥಿತಿಗೃಹದಲ್ಲಿ ವಾಸ್ತವ್ಯ ಹೂಡುವರು. ಮಧ್ಯಾಹ್ನ 3 ಗಂಟೆಗೆ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ, ರಾತ್ರಿ ದೇವಸ್ಥಾನದ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡುವರು.
ಜುಲೈ 1ರ ಬೆಳಿಗ್ಗೆ 6 ಗಂಟೆಗೆ ಕುಕ್ಕೆಶ್ರೀ ಸುಬ್ರಹ್ಮಣ್ಯದಲ್ಲಿ ದೇವರ ದರ್ಶನ ಪಡೆದು, 7 ಗಂಟೆಗೆ ಅತಿಥಿ ಗೃಹಕ್ಕೆ ಆಗಮಿಸುವರು. 9.30ಕ್ಕೆ ಮಡಿಕೇರಿಗೆ ತೆರಳುವರು ಎಂದು ರಾಜ್ಯಪಾಲರ ಕಚೇರಿ ಪ್ರಕಟಣೆ ತಿಳಿಸಿದೆ.

Also Read  ಬಿಳಿನೆಲೆ ಮತಗಟ್ಟೆಯ ಸಿಬ್ಬಂದಿಗಳ ಉಪಾಹಾರಾದ ತಟ್ಟೆಯಲ್ಲಿ ಹಲ್ಲಿ ಪತ್ತೆ ➤ ಅಸ್ವಸ್ಥಗೊಂಡ ಸಿಬ್ಬಂದಿಗಳು ಪುತ್ತೂರು ಆಸ್ಪತ್ರೆಗೆ ➤ ಸತ್ತ ಹಲ್ಲಿಯ ಸುತ್ತ ಸಂಶಯದ ಹುತ್ತ..!!

error: Content is protected !!
Scroll to Top