ಕಾಡುಪ್ರಾಣಿ ಬೇಟೆ ➤ ಆರೋಪಿಗಳು ಅಂದರ್

(ನ್ಯೂಸ್ ಕಡಬ) newskadaba.com ಶಿರೂರು, ಜೂ. 29. ಕಾಡುಪ್ರಾಣಿಯನ್ನು ಶಿಕಾರಿ ನಡೆಸಿ ಕೊಂದ ಬೇಟೆಗಾರರನ್ನು ಪೊಲೀಸರು ಬಂಧಿಸಿದ ಘಟನೆ ಶಿರೂರಿನಲ್ಲಿ ನಡೆದಿದೆ.


ಬಂಧಿತ ಆರೋಪಗಳನ್ನು ಬ್ರಹ್ಮಾವರದ ಚೇರ್ಕಾಡಿ ಗ್ರಾಮದ ಪೇತ್ರಿ ನಿವಾಸಿಗಳಾದ ರಾಘವೇಂದ್ರ, ಪ್ರಶಾಂತ್, ಅರುಣ್, ಚೇತನ್ ಹಾಗೂ ದೀಕ್ಷಿತ್ ಎಂದು ಗುರುತಿಸಲಾಗಿದೆ. ಶಿರೂರು ಪರಿಸರದಲ್ಲಿ ಶಿಕಾರಿ ನಡೆಸಿದ ತಂಡವೊಂದು ಕೆಂಪು ಬಣ್ಣದ ಸ್ವಿಫ್ಟ್ ಕಾರಿನಲ್ಲಿ ಶಿರೂರು ಮೂರುಕೈಯಿಂದ ಸಾಯ್ದರಕಟ್ಟೆ ಕಡೆಗೆ ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿಯನ್ನಾಧರಿಸಿ ದಾಳಿ ನಡೆಸಿದ ಪೊಲೀಸರು, ಕಾರನ್ನು ಅಡ್ಡಗಟ್ಟಿ ತಪಾಸಣೆ ನಡೆಸಿದಾಗ ಬೇಟೆಯಾಡಿರುವುದು ಪತ್ತೆಯಾಗಿದೆ. ಕಾರಿನಲ್ಲಿದ್ದ ರಕ್ತಸಿಕ್ತವಾದ ಬರ್ಕ, ಒಂದು ಮೊಲ, ನಳಿಕೆ ತೋಟೆ ಕೋವಿ, 4 ತೋಟೆಗಳು, 1 ಖಾಲಿ ತೋಟೆ, ಸಣ್ಣ ಟಾರ್ಚ್ ಲೈಟ್, 1 ಹೆಡ್ ಟಾರ್ಚ್ ಲೈಟ್, 1970 ನಗದು ಹಾಗೂ 5 ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

Also Read  ಹಿರಿಯ ಪತ್ರಕರ್ತ, ನಿವೃತ್ತ ಪ್ರಾಚಾರ್ಯ ಕೆ ದಾಮೋದರ ಐತಾಳ ನಿಧನ

error: Content is protected !!
Scroll to Top