ಕಿಡ್ನಾಪ್ ಮಾಡಿ 5 ಲಕ್ಷ ರೂ. ಬೇಡಿಕೆ ಇಟ್ಟಿದ್ದಾರೆಂದು ತಂದೆ-ತಾಯಿಗೆ ವಂಚನೆ ➤ “ಇದು ಪೋಷಕರ ಹಣ ಲಪಟಾಯಿಸುವ ನಾಟಕ” ಎಂದ ಮಗ..!!!!

(ನ್ಯೂಸ್ ಕಡಬ) newskadaba.com ಉಡುಪಿ, ಜೂ. 29. ಮೋಜು ಮಸ್ತಿಗಾಗಿ ಸ್ವತಃ ಮಗನೇ ತಂದೆ ತಾಯಿಯ ಜೊತೆ ಅಪಹರಣದ ನಾಟಕವಾಡಿ ಐದು ಲಕ್ಷ ರೂ. ಹಣಕ್ಕೆ ಬೇಡಿಕೆಯಿಟ್ಟ ಘಟನೆ ಅಂಬಾಗಿಲು ಎಂಬಲ್ಲಿ ನಡೆದಿದೆ.


ಬಂಧಿತ ಆರೋಪಿಯನ್ನು ವರುಣ್ ನಾಯಕ್ ಎಂದು ಗುರುತಿಸಲಾಗಿದೆ. ಈತ ಜೂ. 26ರ ಮುಂಜಾನೆ ಮೂರು ಗಂಟೆ ಸುಮಾರಿಗೆ ತಂದೆ ತಾಯಿಗೆ ಕರೆ ಮಾಡಿ, ನನ್ನನ್ನು ಯಾರೋ ದುಷ್ಕರ್ಮಿಗಳು ಅಪಹರಿಸಿದ್ದಾರೆ. ಬಿಡುಗಡೆ ಮಾಡಲು ಐದು ಲಕ್ಷ ರೂ. ಕೊಡುವಂತೆ ಬೇಡಿಕೆಇಟ್ಡಿದ್ದು, ಕೂಡಲೇ ಐದು ಲಕ್ಷ ರೂ. ಕಳುಹಿಸುವಂತೆ ಪೋಷಕರಲ್ಲಿ ಗಾಬರಿಯಿಮದ ತಿಳಿಸಿದ್ದಾನೆ. ಇದರಿಂದ ಭಯಗೊಂಡ ಪೋಷಕರು, ಉಡುಪಿ ಠಾಣೆಯಲ್ಲಿ ದೂರು ನೀಡಿದ್ದರು.


ಇದರಂತೆ ದೂರು ದಾಖಲಿಸಿಕೊಂಡ ಪೊಲೀಸರು ಮೇಲಾಧಿಕಾರಿಗಳ ಸೂಚನೆಯಂತೆ ವಿಶೇಷ ತಂಡವನ್ನು ರಚಿಸಿ ಯುವಕನ ಫೋನ್ ಲೊಕೇಷನ್ ಪತ್ತೆ ಮಾಡಿದ್ದಾರೆ. ಕರೆ ಮಾಡಿದಾಗ ಯುವಕ ಗೋವಾದಲ್ಲಿರುವುದು ಪತ್ತೆಯಾಗಿದ್ದು, ಕೂಡಲೇ ಗೋವಾಕ್ಕೆ ಸಿಬ್ಬಂದಿಗಳನ್ನು ಕಳುಹಿಸಿದ್ದಾರೆ. ಈ ವೇಳೆ ಮೊಬೈಲ್ ಲೊಕೇಶನ್ ಆಧರಿಸಿ ಸ್ಥಳಕ್ಕೆ ಹೋದ ಪೊಲೀಸರಿಗೆ, ಅಪಹರಣಕ್ಕೆ ಒಳಗಾಗಿದ್ದೇನೆ ಎಂದು ಕರೆಮಾಡಿದ್ದ ಯುವಕ ತನ್ನ ಸ್ನೇಹಿತರ ಜೊತೆ ಗೋವಾದ ಕ್ಯಾಸಿನೋ ಒಂದರಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದುದನ್ನು ಕಂಡು ಬೆಚ್ಚಿಬಿದ್ದಿದ್ದಾರೆ.

Also Read  ನೂಜಿಬಾಳ್ತಿಲ ಗ್ರಾ.ಪಂ. ಆಡಳಿತಾಧಿಕಾರಿ ಭರತ್ ಬಿ.ಎಂ. ಅಧಿಕಾರ ಸ್ವೀಕಾರ

ಬಳಿಕ ಪೊಲೀಸರು ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಾನು ವಿದ್ಯಾಭ್ಯಾಸವನ್ನು ಅರ್ಧಕ್ಕೇ ನಿಲ್ಲಿಸಿ, ಕೆಲಸವಿಲ್ಲದೇ ಸ್ನೇಹಿತರ ಜೊತೆ ಮೋಜು ಮಸ್ತಿ ಮಾಡುತ್ತಿದ್ದೆ. ಈ ವೇಳೆ ಕೈಯಲ್ಲಿ ಹಣ ಇಲ್ಲದೇ ಇದ್ದುದರಿಂದ ಪೋಷಕರ ಬಳಿಯಿರುವ ಹಣವನ್ನು ಹೇಗಾದರೂ ಮಾಡಿ ಲಪಟಾಯಿಸುವ ಉದ್ದೇಶದಿಂದ ಈ ನಾಟಕವಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಪೋಷಕರ ಹಣ ಎಗರಿಸುವ ಉದ್ದೇಶ ಹಾಗೂ ಪೊಲೀಸರ ಸಮಯವನ್ನು ವ್ಯರ್ಥಪಡಿಸಿದ ಹಿನ್ನೆಲೆ ಯುವಕನ ವಿರುದ್ದ ಕ್ರಮ ಕೈಗೊಳ್ಳಲಾಗಿದ್ದು, ಯುವಕನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

Also Read  ಕಡಬ ಠಾಣೆಯ ಸ್ವಾಧೀನದಲ್ಲಿರುವ ವಿವಿಧ ವಾಹನಗಳ ಮಾಲಕರಿಗೆ ಸೂಚನೆ ► ವಾರದೊಳಗೆ ವಾಹನಗಳನ್ನು ಬಿಡಿಸದಿದ್ದಲ್ಲಿ ಬಹಿರಂಗ ಹರಾಜಿಗೆ ಚಾಲನೆ

error: Content is protected !!
Scroll to Top