(ನ್ಯೂಸ್ ಕಡಬ) newskadaba.com ಬಂಟ್ವಾಳ, ಜೂ. 29. ಒಂಟಿ ಮಹಿಳೆ ವಾಸವಿದ್ದ ಮನೆಯ ಹೊರಗಡೆ ತೊಳೆದಿಟ್ಟಿದ್ದ ಪಾತ್ರೆಗಳನ್ನು ಕಳ್ಳತನಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಬಂಧಿಸಿದ್ದು, ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.

ಬಂಧಿತ ಆರೋಪಿಯನ್ನು ಅಗರಂಗಡಿ ನಿವಾಸಿ ಪ್ರವೀಣ ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ಈತನ ಸಹೋದರ ಸತೀಶ್ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳು ಜೂ. 25ರಂದು ಮನೆಯ ಹೊರಗಡೆ ಇದ್ದ ಸುಮಾರು 3500ರೂ. ಮೌಲ್ಯದ ಪಾತ್ರೆಗಳನ್ನು ಕಳ್ಳತನಗೈದಿದ್ದರು. ಈ ಕುರಿತು ಅಗರಂಗಡಿ ನಿವಾಸಿ ಪದ್ಮನಾಭ ನಾಯಕ್ ಅವರು ನೀಡಿದ ದೂರಿನಂತೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.