(ನ್ಯೂಸ್ ಕಡಬ) newskadaba.com ವಿಟ್ಲ, ಜೂ. 29. ಬೆಳೆಯುತ್ತಿರುವ ಪಟ್ಟಣ ಕಲ್ಲಡ್ಕದಲ್ಲಿ ತ್ಯಾಜ್ಯ ನಿರ್ವಹಣೆ ಕಾರ್ಯ ಸಮರ್ಪಕವಾಗಿ ನಡೆಯದೇ ಇರುವುದು ಸ್ವಚ್ಚತೆಗೆ ಸವಾಲಾಗಿ ಪರಿಣಮಿಸಿದೆ.
ಪೇಟೆಯ ಕಲ್ಲಡ್ಕ ವಿಟ್ಲ ರಸ್ತೆಯ ಉದ್ದಗಲಕ್ಕೂ ಜನರು ಕಸ ತ್ಯಾಜ್ಯಗಳನ್ನು ತಂದು ಸುರಿಯುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಈಗಾಗಲೇ ಡೆಂಗ್ಯೂ, ಹಂದಿಜ್ವರ ಎಲ್ಲೆಡೆ ವ್ಯಾಪಿಸಿದ್ದು ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕಾಗಿದೆ. ದಿನಂಪ್ರತಿ ಕಸ ತ್ಯಾಜ್ಯಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡಿ ಪೇಟೆಯ ಸ್ವಚ್ಚತೆ ಕಾಪಾಡದಿದ್ದಲ್ಲಿ ಮುಂದೆ ಸಾಂಕ್ರಾಮಿಕ ರೋಗದ ತಾಣವಾಗಿ ಕಲ್ಲಡ್ಕ ಪೇಟೆಯು ಪರಿವರ್ತನೆಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ.