ವಿಟ್ಲ: ಬಸ್ ನಿಲ್ದಾಣದಲ್ಲಿ ರಕ್ತ ಮತ್ತು ತಲೆಯ ಒಳಭಾಗದ ತುಣುಕುಗಳು ಪತ್ತೆ..!! ➤ ಕೊಲೆ ಅಥವಾ ಅಪಘಾತ ಶಂಕೆ

(ನ್ಯೂಸ್ ಕಡಬ) newskadaba.com ವಿಟ್ಲ, ಜೂ. 29. ಇಲ್ಲಿನ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ರಕ್ತ ಮತ್ತು ತಲೆಯ ಒಳಭಾಗದ ತುಣುಕುಗಳು ಪತ್ತೆಯಾದ ಘಟನೆ ಇಂದು ಬೆಳಕಿಗೆ ಬಂದಿದೆ.


ಬದನಾಜೆ ಬಸ್ ನಿಲ್ದಾಣದಲ್ಲಿ ರಕ್ತ ಮತ್ತು ತಲೆಯ ಒಳಭಾಗದ ತುಣುಕುಗಳು ಪತ್ತೆಯಾಗಿದ್ದು, ಈ ಕುರಿತು ಸಾರ್ವಜನಿಕ ವಲಯದಲ್ಲಿ ಆತಂಕ ಮೂಡಿಸಿದೆ. ಯಾರನ್ನಾದರೂ ಹತ್ಯೆ ಮಾಡಲಾಗಿದೆಯೇ ಅಥವಾ ಅಪಘಾತದ ಗಾಯಾಳುಗಳು ಇಲ್ಲಿ ಕುಳಿತು ಮತ್ತೆ ಆಸ್ಪತ್ರೆಗೆ ತೆರಳಿರಬಹುದೇ ಎಂಬ ಅನುಮಾನಗಳು ಸೃಷ್ಠಿಯಾಗಿವೆ. ಘಟನಾ ಸ್ಥಳಕ್ಕೆ ವಿಟ್ಲ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ.

Also Read  ? ನೀರಿನಲ್ಲಿ ಮುಳುಗಿ ಮೂವರು ಪುಟ್ಟ ಸಹೋದರರ ದುರ್ಮರಣ ➤ ಮನಕಲುಕುವ ಘಟನೆಗೆ ಸಾಕ್ಷಿಯಾಯಿತು ದೇವರನಾಡು..!

error: Content is protected !!
Scroll to Top