ಸಂಪಾಜೆಯಲ್ಲಿ ಮತ್ತೆ ಭೂಕಂಪನ…!!

(ನ್ಯೂಸ್ ಕಡಬ) newskadaba.com ಸಂಪಾಜೆ, ಜೂ. 28. ಸಂಪಾಜೆಯಲ್ಲಿ ಇಂದು ಸಂಜೆ 4.40ರ ವೇಳೆಗೆ ಮತ್ತೆ ಭೂಕಂಪದ ಅನುಭವವಾಗಿದೆ.

ಹಲವರಿಗೆ ಈ ಲಘು ಭೂಕಂಪನದ ಬಗ್ಗೆ ದೂರವಾಣಿ ಮೂಲಕ ತಮಗಾದ ಅನುಭವವನ್ನು ಹಂಚಿಕೊಂಡಿದ್ದಾರೆ ಎನ್ನಲಾಗಿದೆ. ಇಂದು ಬೆಳಗ್ಗೆ 7.45 ಕ್ಕೆ ಭೂಮಿ ಭಾರಿ ಸದ್ದಿನೊಂದಿಗೆ ಕಂಪಿಸಿತ್ತು. ಸಂಪಾಜೆ ಗೂನಡ್ಕ ಸುತ್ತಮುತ್ತಲಿನ ಕೆಲವು ಭಾಗಗಳಲ್ಲಿ ಭಾರಿ ಕಂಪನವಾಗಿತ್ತು. ರಿಕ್ಟರ್ ಮಾಪಕದಲ್ಲಿ 3.0ರ ತೀವ್ರತೆ ಹೊಂದಿದ್ದ ಕಂಪನದಿಂದ ಜನರು ಭಯಭೀತರಾಗಿದ್ದು, ಇದೀಗ ಮತ್ತೆ ಮತ್ತೆ ಭೂಮಿ ಕಂಪಿಸುತ್ತಿರುವುದರಿಂದ ಒಂದು ರೀತಿಯ ಭಯದ ವಾತಾವರಣ ನಿರ್ಮಾಣವಾಗಿದೆ.

Also Read  ಲವ್ ಜಿಹಾದ್ ತಡೆಗೆ ಸಹಾಯವಾಣಿ ಆರಂಭಿಸಿದ ಭಜರಂಗದಳ ಮತ್ತು ವಿಶ್ವ ಹಿಂದೂ ಪರಿಷತ್ ಸಂಘಟನೆ

error: Content is protected !!
Scroll to Top