ವಿದ್ಯಾರ್ಥಿಯ ಮೇಲೆ ಹಲ್ಲೆ ಪ್ರಕರಣ ➤ SYS ದ.ಕ (ಈಸ್ಟ್) ಖಂಡನೆ

(ನ್ಯೂಸ್ ಕಡಬ) newskadaba.com ಪುತ್ತೂರು, ಜೂ. 28. ಜೂ. 27ರಂದು ರಾತ್ರಿ ಮಂಗಳೂರು ಪರಿಸರದ ಕೃಷ್ಣಾಪುರ 6ನೇ ಬ್ಲಾಕ್ ಮದ್ರಸದ ಆರನೇ ತರಗತಿಯ ವಿದ್ಯಾರ್ಥಿಯ ಶಯಾನ್ (12) ಎಂಬಾತನ ಮೇಲೆ ನಡೆಸಿದ ದುಷ್ಕರ್ಮಿಗಳ ಹಲ್ಲೆಯನ್ನು ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ರಿ.) ಎಸ್‌ವೈಎಸ್ ದಕ್ಷಿಣ ಕನ್ನಡ ಈಸ್ಟ್ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.

ವಿದ್ಯೆ ಕಲಿಯುವ ಪುಟಾಣಿಗಳನ್ನು ಗುರಿಯಾಗಿಸಿ ಅವರ ಮೇಲೆ ದೈಹಿಕ ಹಲ್ಲೆ ನಡೆಸಿರುವುದು ಹೇಯಕೃತ್ಯವಾಗಿದೆ. ಸೌಹಾರ್ಧ ಸಮಾಜವನ್ನು ಒಡೆಯುವ ಹಾಗೂ ಚ್ಯುತಿಯುಂಟು ಮಾಡುವ ಸಮಾಜಘಾತುಕ ಶಕ್ತಿಯನ್ನು ಮಟ್ಟ ಹಾಕಬೇಕು. ವಿದ್ಯಾರ್ಥಿಗೆ ಹಲ್ಲೆ ನಡೆಸಿದ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳನ್ನು ಎಸ್‌ವೈಎಸ್ ಈಸ್ಟ್ ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ಸ‌ಅದಿ ಮಜೂರುರವರು ಒತ್ತಾಯಿಸಿದ್ದಾರೆ.

Also Read  ಕಡಬ: ಮದುವೆಯಾದ ಅಪ್ರಾಪ್ತ ಬಾಲಕಿ ಗರ್ಭವತಿ ➤ ಪತಿ ಹಾಗೂ ಇತರರ ವಿರುದ್ಧ ಕೇಸ್

error: Content is protected !!
Scroll to Top