ಸುಳ್ಯ: ವಿಖಾಯ ತರಬೇತಿಗೆ ತಹಶೀಲ್ದಾರ್ ಅನಿತಾ ಲಕ್ಷ್ಮೀ ಭೇಟಿ

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 28. ಸುಳ್ಯ ವಲಯ ವಿಖಾಯ ಹಾಗೂ ಎಸ್ಕೆಎಸ್ಸೆಸ್ಸೆಫ್ ಗೂನಡ್ಕ ಶಾಖೆ ವತಿಯಿಂದ ಪೇರಡ್ಕ ತೆಕ್ಕಿಲ್ ಮಹಮ್ಮದ್ ಹಾಜಿ ಸ್ಮಾರಕ ಮದರಸ ಸಭಾಂಗಣದಲ್ಲಿ ನಡೆಯುತ್ತಿದ್ದ ವಿಖಾಯ ತರಬೇತಿ ಶಿಬಿರಕ್ಕೆ ಸುಳ್ಯ ತಹಶೀಲ್ದಾರ್ ಅನಿತಾ ಲಕ್ಷ್ಮಿ ಭೇಟಿ ನೀಡಿ ಮೆಚ್ಚುಗೆ ವ್ಯಕ್ತ ಪಡಿಸಿದರು.

ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿರುವ ವಿಖಾಯ ತಂಡವನ್ನು ಪ್ರಶಂಸನೀಯ ಎಂದರು. ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್, ಸದಸ್ಯ ಎಸ್ ಕೆ.ಹನೀಫ್, ಸಂಪಾಜೆ ಗ್ರಾಮ ಪಂಚಾಯತ್ ಅಧಿಕಾರಿ ರಹೀಂ ಬೀಜದಕಟ್ಟೆ, ವಿಖಾಯ ಜಿಲ್ಲೆ ನಾಯಕರಾದ ಡಾ.ತಾಜುದ್ದೀನ್ ಟರ್ಲಿ, ಸುಳ್ಯ ವಲಯ ವಿಖಾಯ ಚೇರ್ ಮನ್ ಶರೀಫ್ ಅಜ್ಜಾವರ, ಕಾರ್ಯದರ್ಶಿ ಕಲಂದರ್ ಎಲಿಮಲೆ, ಸುಳ್ಯ ವಲಯ ಎಸ್ ಕೆ ಎಸ್ ಎಫ್ ಅಧ್ಯಕ್ಷ ಅಬ್ದುಲ್ಲ ಫೈಝಿ, ಕಾರ್ಯದರ್ಶಿ ಆಶಿಕ್ ಸುಳ್ಯ, ಹಾಜಿ ಸಾಜಿದ್ ಅಝ್ಹರಿ, ಖಾದರ್ ಮೊಟ್ಟಂಗಾರ್, ಸುಳ್ಯ ಕ್ಲಸ್ಟರ್ ಕಾರ್ಯದರ್ಶಿ ತಾಜುದ್ದೀನ್ ಅರಂತೋಡು ಮೊದಲಾದವರು ಉಪಸ್ಥಿತರಿದ್ದರು.

Also Read  ತಿತ್ಲಿ ಚಂಡಮಾರುತಕ್ಕೆ ಉಳ್ಳಾಲ, ಉಚ್ಚಿಲದಲ್ಲಿ ಪ್ರಕ್ಷುಬ್ಧಗೊಂಡ ಕಡಲು ► ಪಣಂಬೂರಿನಲ್ಲಿ ಹೈ ಅಲರ್ಟ್ ಘೋಷಣೆ

 

error: Content is protected !!
Scroll to Top