ಸುಳ್ಯ: ಭೂಕಂಪನದಿಂದ ಹಾನಿಯಾದ ಮನೆಗೆ ತಹಶೀಲ್ದಾರ್ ಭೇಟಿ

(ನ್ಯೂಸ್ ಕಡಬ) newskadaba.com ಗೂನಡ್ಕ, ಜೂ. 28. ಇಲ್ಲಿನ ಕಲ್ಲುಗುಂಡಿ ಗೂನಡ್ಕ ಭಾಗದಲ್ಲಿ ಭೂಕಂಪನದಿಂದ ಹಾನಿಯಾದ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದರು. ಗೂನಡ್ಕ ಅಬ್ಬಾಸ್ ಎಂಬವರ ಮನೆಗೆ ದರ್ಖಾಸ್ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯ ಪಿಕೆ ಅಬುಸಾಲಿ ಹಾಗೂ ಸಿದ್ದೀಕ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡರು.

ಸುಳ್ಯ ತಹಶೀಲ್ದಾರ್ ಅನಿತಾ ಲಕ್ಷ್ಮಿ ಸುಳ್ಯ ಎಸ್.ಐ.ದಿಲೀಪ್ ಕುಮಾರ್, ಸಂಪಾಜೆ ಪಿಡಿಓ ಸರಿತಾ ಡಿಸೋಜಾ, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಕೆ.ಹಮೀದ್, ಸದಸ್ಯರಾದ ಶೌವಾದ್ ಗೂನಡ್ಕ, ಎಸ್.ಕೆ.ಹನೀಫ್, ಕಲ್ಲುಗುಂಡಿ ಹೊರಠಾಣೆಯ ಎಎಸ್ಐ.ರವೀಂದ್ರ ಹಾಗೂ ಸಂಪಾಜೆ ಗ್ರಾಮ ಪಂಚಾಯತ್ ಅಧಿಕಾರಿಗಳು ಜೊತೆಗಿದ್ದರು.

Also Read  ಬದುಕಿನ ಅರ್ಥ ತಿಳಿಯದ ಜೀವನ ವ್ಯರ್ಥ: ಧರ್ಮಪಾಲನಾಥ ಶ್ರೀ ► ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದಿಂದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ

 

error: Content is protected !!
Scroll to Top