ಮಂಗಳೂರು: ಬೈಕ್ ಗಳ ನಡುವೆ ಢಿಕ್ಕಿ ➤ ರಸ್ತೆಗೆಸೆಯಲ್ಪಟ್ಟ ಮಹಿಳೆಯ ಕೈ ಮೇಲೆ ಹರಿದ ಲಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂ. 28. ಬೈಕ್ ಗಳ ನಡುವೆ ಢಿಕ್ಕಿ ಸಂಭವಿಸಿದ ಪರಿಣಾಮ ರಸ್ತೆಗೆಸೆಯಲ್ಪಟ್ಟ ಮಹಿಳೆಯ ಕೈ ಮೇಲೆ ಲಾರಿ ಹರಿದ ಘಟನೆ ಕೆಪಿಟಿ ಜಂಕ್ಷನ್ ನಲ್ಲಿ ನಡೆದಿದೆ.

ಗಾಯಾಳು ಮಹಿಳೆಯನ್ನು ಮರಿಯಮ್ಮ(47) ಎಂದು ಗುರುತಿಸಲಾಗಿದೆ. ಹನೀಫ್ ಎಂಬವರು ಕೆಪಿಟಿಯ ಪೆಟ್ರೋಲ್ ಪಂಪ್ ನಲ್ಲಿ ಬೈಕ್ ಪೆಟ್ರೋಲ್ ಹಾಕಿಸಿ ವಿಟ್ಲ ಕಡೆಗೆ ಹೋಗಲು ಹೆದ್ದಾರಿ ಪ್ರವೆಶಿಸಿದ್ದರು. ಅವಾಗ ವಿರುದ್ದ ದಿಕ್ಕಿನಿಂದ ಬಂದ ಬೈಕೊಂದು ಢಿಕ್ಕಿ ಹೊಡೆದಿದೆ. ಪರಿಣಾಮ ಬೈಕಿನ ಹಿಂಬದಿ ಕುಳಿತಿದ್ದ ಮರಿಯಮ್ಮ ಎಂಬವರು ರಸ್ತೆಗೆ ಎಸೆಯಲ್ಪಟ್ಟಿದ್ದು, ಅದೇ ವೇಳೆ ಬಂದ ಲಾರಿಯು ಮಹಿಳೆಯ ಕೈಯ ಮೇಲೆ ಹರಿದುಹೋಗಿದೆ. ಇದರಿಂದ ಮಹಿಳೆಯ ಕೈಗೆ ಗಂಭೀರ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿದೆ.

error: Content is protected !!

Join the Group

Join WhatsApp Group