ಸುಳ್ಯ: ಯುವಕನಿಗೆ ಬೆದರಿಸಿ ಮೊಬೈಲ್ ಫೋನ್ ಹಾಗೂ ನಗದು ದರೋಡೆ

(ನ್ಯೂಸ್ ಕಡಬ) newskadaba.com ಸುಳ್ಯ, ಜೂ. 28. ಹಾಸನಕ್ಕೆ ವ್ಯಾಪಾರಕ್ಕೆ ಹೋಗಿದ್ದ ಜಯನಗರ ಮೂಲದ ಯುವಕನ ಕೈಯಿಂದ ಯಾರೋ ಅಪರಿಚಿತರು ತಡರಾತ್ರಿ ಒಂದು ಗಂಟೆಯ ವೇಳೆಗೆ ಮೊಬೈಲ್ ಹಣ ಕದ್ದೊಯ್ದ ಘಟನೆ ವರದಿಯಾಗಿದೆ.


ಸುಳ್ಯ ಜಯನಗರ ನಿವಾಸಿ ಪ್ರದೀಪ್ ಎಂಬ ಯುವಕ ಹಾಸನದಲ್ಲಿ ಮಸಾಲೆ ಪದಾರ್ಥಗಳ ಲೈನ್ ಸೇಲ್ ಗೆಂದು ಹೋಗಿದ್ದ ಈತ ಸೋಮವಾರ ರಾತ್ರಿ ಒಂದು ಗಂಟೆಯ ವೇಳೆಗೆ ಬಸ್ಸಿನಿಂದ ಇಳಿದು ರೂಮಿಗೆ ಹೋಗುತ್ತಿದ್ದ ಸಂದರ್ಭ ಯಾರೋ ಅಪರಿಚಿತ ವ್ಯಕ್ತಿಗಳು ಬಂದು ಚೂರಿ ತೋರಿಸಿ ಆತನ ಬಳಿಯಿದ್ದ ಸುಮಾರು 20 ಸಾವಿರ ರೂಪಾಯಿ, ಮೊಬೈಲ್ ಫೋನ್ ಹಾಗೂ ಅವರ ಕೈಯಲ್ಲಿದ್ದ 300 ರೂಪಾಯಿಗಳನ್ನು ಕದ್ದು ಪರಾರಿಯಾಗಿದ್ದಾರೆ ಎನ್ನಲಾಗಿದೆ. ನಡೆದ ಘಟನೆಯನ್ನು ಆತ ದೂರವಾಣಿ ಮೂಲಕ ಸುಳ್ಯದಲ್ಲಿರುವ ಮಾಲಕರಿಗೆ ತಿಳಿಸಿದ್ದು, ಪೊಲೀಸರಿಗೆ ಮಾಹಿತಿ ನೀಡುವಂತೆ ಮಾಲಕರು ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

Also Read  ಸಿಲಿಂಡರ್ ಕಳವು ಪ್ರಕರಣ: ಇಬ್ಬರು ಆರೋಪಿಗಳು ಅರೆಸ್ಟ್

error: Content is protected !!
Scroll to Top