“ಕಡಬ ರೆಸಿಡೆನ್ಸಿ” ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

(ನ್ಯೂಸ್ ಕಡಬ) newskadaba.com ಕಡಬ, ಜೂ. 28. ಇಲ್ಲಿನ ಮುಖ್ಯರಸ್ತೆಯಲ್ಲಿರುವ ಶ್ರೀರಾಮ ಟವರ್ಸ್ ಹಿಂಭಾಗದಲ್ಲಿ ನೂತನವಾಗಿ ಆರಂಭಗೊಂಡಿರುವ ಕಡಬ ರೆಸಿಡೆನ್ಸಿ ಎಸಿ ಹಾಗೂ ನಾನ್ ಎಸಿ ಫ್ಯಾಮಿಲಿ ರೆಸ್ಟೋರೆಂಟ್‌ನ ಉದ್ಘಾಟನಾ ಸಮಾರಂಭವು ಜೂ.26ರಂದು ನಡೆಯಿತು.

ಇದರ ಉದ್ಘಾಟನೆಯನ್ನು ಕೇರಳದ ಹಿರಿಯ ಉದ್ಯಮಿ ಇ.ಪಿ.ಥಾಮಸ್ ರವರು ರಿಬ್ಬನ್ ಕತ್ತರಿಸುವ ಮೂಲಕ ನೆರವೇರಿಸಿದರು. ದೀಪ ಬೆಳಗಿಸಿ ಮಾತನಾಡಿದ ಜಿ.ಪಂ.ಮಾಜಿ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಬೆಳೆಯುತ್ತಿರುವ ಕಡಬ ಪೇಟೆಯಲ್ಲಿ ಈ ರೀತಿಯ ಸುಸಜ್ಜಿತವಾದ ವ್ಯವಸ್ಥೆ ಅಗತ್ಯವಾಗಿ ಬೇಕಾಗಿತ್ತು. ಅದು ಇಂದು ಸಾಕಾರಗೊಂಡಿದೆ ಎಂದರು. ಜಿಲ್ಲಾ ಪರಿಷತ್ ಮಾಜಿ ಸದಸ್ಯ ಸಯ್ಯದ್‌ಮೀರಾ ಸಾಹೇಬ್‌ರವರು ಮಾತನಾಡಿ, ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹತ್ತಿರದಲ್ಲಿರುವ ಕಡಬವು ತಾಲೂಕು ಕೇಂದ್ರವಾಗಿ ಜನಸಾಮಾನ್ಯರನ್ನು ಸೆಳೆಯುತ್ತಿದೆ. ಅಂತಹ ಸಂದರ್ಭದಲ್ಲಿ ಕಡಬ ರೆಸಿಡೆನ್ಸಿ ಆರಂಭಗೊಂಡಿರುವುದು ಸಕಾಲಿಕ ಎಂದರು. ನಿವೃತ್ತ ಮುಖ್ಯಶಿಕ್ಷಕ ಜನಾರ್ಧನ ಗೌಡ ಪಣೆಮಜಲು ಮಾತನಾಡಿ, ಸಂಸ್ಥೆಯು ಉತ್ತಮ ಸೇವೆ ನೀಡುವ ಮೂಲಕ ಅಭಿವೃದ್ಧಿಯ ಪಥದಲ್ಲಿ ಸಾಗಲಿ ಎಂದರು. ಸಂಸ್ಥೆಯ ಪಾಲುದಾರ ಸ್ಟೀಫನ್ ಲೂಕೋಸ್‌ರವರು ಮಾತನಾಡಿ ಸಸ್ಯಾಹಾರಿ, ಮಾಂಸಹಾರಿ ಹಾಗೂ ವಿವಿಧ ರೀತಿಯ ಚೈನೀಸ್ ಖಾದ್ಯಗಳು ಲಭ್ಯವಿರುವ ನೂತನ ರೆಸ್ಟೋರೆಂಟ್‌ನಲ್ಲಿ ಎಸಿ ಹಾಗೂ ನಾನ್ ಎಸಿ ಲಾಡ್ಜಿಂಗ್ ವ್ಯವಸ್ಥೆಯೂ ಇದೆ ಎಂದು ಹೇಳಿ ಎಲ್ಲರ ಸಹಕಾರ ಕೋರಿದರು. ಪಾಲುದಾರರಾದ ಸೋನಿ ಥಾಮಸ್, ಜೋಸನ್ ಮ್ಯಾಥ್ಯೂ, ಎಪಿಎಂಸಿ ನಿರ್ದೇಶಕಿ ಪುಲಸ್ತ್ಯಾ ರೈ, ಡಾ|ತ್ರಿಮೂರ್ತಿ, ಪ್ರಮುಖರಾದ ಬೈತಡ್ಕ ಶೀನಪ್ಪ ಗೌಡ, ಕೆ.ಪಿ.ತೋಮಸ್, ವಿಜಯಕುಮಾರ್ ರೈ ಕರ್ಮಾಯಿ, ಬಾಲಕೃಷ್ಣ ಗೌಡ ಬಳ್ಳೇರಿ, ಕೃಷ್ಣಪ್ಪ ಜಿ, ಸರ್ವೋತ್ತಮ ಗೌಡ ನೆಲ್ಯಾಡಿ ಮೊದಲಾದವರು ಆಗಮಿಸಿ ಶುಭ ಹಾರೈಸಿದರು.

Also Read  ಕಳಸಾ-ಬಂಡೂರಿ ಯೋಜನೆಗೆ ಅನುಮೋದನೆ ನೀಡಿ: ಕೇಂದ್ರ ಸರ್ಕಾರಕ್ಕೆ ಕರ್ನಾಟಕ ಆಗ್ರಹ

error: Content is protected !!
Scroll to Top