ಸುಬ್ರಹ್ಮಣ್ಯ: ಗೃಹಸಚಿವ ಅರಗ ಜ್ಞಾನೇಂದ್ರ ಭೇಟಿ ➤ ಠಾಣೆಗೆ ಶೀಘ್ರವೇ ಹೊಸಕಟ್ಟಡದ ಭರವಸೆ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ, ಜೂ. 27. ಇಲ್ಲಿನ ಪೊಲೀಸ್ ಠಾಣೆಗೆ ಗೃಹಸಚಿವ ಆರಗ ಜ್ಞಾನೇಂದ್ರ ಭೇಟಿ ನೀಡಿದ್ದು, ಠಾಣೆಯ ವತಿಯಿಂದ ಸಚಿವರಿಗೆ ಗೌರವ ವಂದನೆ ಸಲ್ಲಿಸಲಾಯಿತು.

ಸುಬ್ರಹ್ಮಣ್ಯ ಠಾಣೆಗೆ ಟರ್ಪಾಲು ಹೊದಿಸಿರುವ ಕುರಿತು ಮಾಧ್ಯಮದಲ್ಲಿ ಬಂದ ವರದಿಯನ್ನು ಅರಿತು ಠಾಣೆಯ ಕಟ್ಟಡ ಪರಿಶೀಲಿಸಿದ ಅವರು, ಎಲ್ಲಾ ತೊಡಕು ನಿವಾರಿಸಿ ಶೀಘ್ರವೇ ಸುಬ್ರಹ್ಮಣ್ಯ ಠಾಣೆಗೆ ಹೊಸ ಕಟ್ಟಡ ಕಟ್ಟಿಸುವಂತೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಡಿ ವೈಎಸ್ಪಿ ಡಾ. ಗಾನಾ ಪಿ ಕುಮಾರ್, ಸುಳ್ಯ ವೃತ್ತದ ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ, ಸುಬ್ರಹ್ಮಣ್ಯ ಠಾಣಾ ಎಸ್ಐ ಜಂಬೂರಾಜ್ ಮಹಾರಾಜ್ ಹಾಗೂ ಸಿಬ್ಬಂದಿಗಳು ಮೊದಲಾದವರು ಉಪಸ್ಥಿತರಿದ್ದರು.

Also Read  ಪರಮೇಶ್ ಮೇಸ್ತ ಪ್ರಕರಣದ ವದಂತಿಗಳಲ್ಲಿ ಯಾವುದೇ ಸತ್ಯಾಂಶವಿಲ್ಲ ► ಸುಳ್ಳು ಸುದ್ದಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ: ಐಜಿಪಿ ನಿಂಬಾಲ್ಕರ್

error: Content is protected !!
Scroll to Top