ಇಂಡಿಯನ್ ಸೋಶಿಯಲ್ ಫೋರಂ(ISF) ಅಸೀರ್ ಪ್ರಾಂತ್ಯದ ವತಿಯಿಂದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ

(ನ್ಯೂಸ್ ಕಡಬ) newskadaba.com ಜೂ. 27. ಇಂಡಿಯನ್ ಸೋಶಿಯಲ್ ಫೋರಮ್ ISF ಸೌದಿ ಅರೇಬಿಯಾದ್ಯಂತ ನಡೆಸುತ್ತಿರುವ ಸದಸ್ಯತ್ವ ಅಭಿಯಾನದ ಪ್ರಯುಕ್ತ ISF ಅಸೀರ್ ಪ್ರಾಂತ್ಯದ ಉದ್ಘಾಟನಾ ಕಾರ್ಯಕ್ರಮವು ಕಮೀಶ್ ಮುಶಾಯತ್‌ನಲ್ಲಿರುವ ಮುನೀರಾ ಆಡಿಟೋರಿಯಂನಲ್ಲಿ ನಡೆಯಿತು.

ಭಾರತದಲ್ಲಿ ನಡೆಯುತ್ತಿರುವ ಪ್ರಸಕ್ತ ರಾಜಕೀಯ ಸನ್ನಿವೇಶಗಳು ಹಾಗೂ ಈ ಸಂಧರ್ಭದಲ್ಲಿ ISF ನ ಪ್ರತಿಯೋರ್ವ ಕಾರ್ಯಕರ್ತರ ಜವಾಬ್ದಾರಿ ಕುರಿತು ಇಕ್ಬಾಲ್ ಕೂಳೂರು(ಅಧ್ಯಕ್ಶರು, ಜಿಝಾನ್ ಕರ್ನಾಟಕ ಚಾಪ್ಟರ್) ರವರು ದಿಕ್ಸೂಚಿ ಭಾಷಣದಲ್ಲಿ ಮಾತನಾಡಿದರು. ವಿವಿಧ ರಾಜಕೀಯ ಪಕ್ಷಗಳಿಂದ ISF ಗೆ ಸೇರ್ಪಡೆಗೊಂಡ ನೂತನ ಸದಸ್ಯರಿಗೆ ರಾಜ್ಯ ಸಮಿತಿಯ ವೆಲ್ಫೇರ್ ಸಂಚಾಲಕರಾದ ಹನೀಫಾ ಮಂಜೇಶ್ವರರವರು ಶಾಲು ಹೊದಿಸಿ ಸ್ವಾಗತಿಸಿದರು. ಕಾರ್ಯಕ್ರಮವನ್ನು ಹನೀಫಾ ಚಾಳಿಪ್ಪುರಂ(ಅಧ್ಯಕ್ಷರು ISF ಅಸೀರ್ ರಾಜ್ಯ ಸಮಿತಿ) ರವರು ಉದ್ಘಾಟಿಸಿದರು. ಮುಖ್ಯ ಪ್ರಭಾಷಣ ಮಾಡಿದ ಅನಸ್ ತಿರುನ್ನಾವಾಯರವರು ದೇಶದ ಸಂವಿಧಾನ ಉಳಿಯಬೇಕಾದರೆ ಸ್ವಾತಂತ್ಯ ಹೋರಾಟಗಾರರ ಜೈಲುವಾಸ, ಸರ್ವಾಧಿಕಾರಿಗಳ ಗುಂಡುಗಳಿಗೆ ದೇಶದ ಎಲ್ಲಾ ಪ್ರಜೆಗಳು ಎದೆಯೊಡ್ಡುವ ಕಾಲ ಮತ್ತೊಮ್ಮೆ ಮರುಕಳಿಸಲಿದೆ ಎಂದರು. ISF ಖಮೀಷ್ ಬ್ಲಾಕ್ ಅಧ್ಯಕ್ಷರಾದ ಇಲ್ಯಾಸ್ ಇಡಕ್ಕುನ್ನಂ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಅಭಾ ಬ್ಲಾಕ್ ಅಧ್ಯಕ್ಷರಾದ ಅಬೂಬಕ್ಕರ್ ಸಅದಿಯವರು ಸ್ವಾಗತಿದರು. ಮುನೀರ್ ಚಕ್ಕುವಳ್ಳಿ ನಿರೂಪಿಸಿದ ಕಾರ್ಯಕ್ರಮವನ್ನು ಯೂಸುಫ್ ಚೇಳಾಂಬ್ರರವರು ಧನ್ಯವಾದ ಸಮರ್ಪಿಸಿದರು.

Also Read  ನಡುರಸ್ತೆಯಲ್ಲೇ ಜುಟ್ಟು ಹಿಡಿದು ಮಹಿಳೆಯರಿಬ್ಬರ ಕಿತ್ತಾಟ ►ಸಾರ್ವಜನಿಕರಿಗೆ ಸಿಕ್ಕಿದೆ ಪುಕ್ಕಟೆ ಮನರಂಜನೆ..!!!

error: Content is protected !!
Scroll to Top